ರೈಲಿನಿಂದ ಇಳಿಯುವಾಗ ಬಿದ್ದು ಕಾಲು ಕಳೆದುಕೊಂಡ ಪೊಲೀಸ್.  
ಜಿಲ್ಲೆ

ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಪೊಲೀಸ್

ನವೀನ ಬಿ.ಎಂ

ಶಿವಮೊಗ್ಗ: ವಿದ್ಯಾನಗರ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಯಶವಂತಪುರ-ಶಿವಮೊಗ್ಗ ರೈಲಿಗೆ ಸಿಲುಕಿ ಪೊಲೀಸ್ ಸಿಬ್ಬಂದಿಯೊಬ್ಬರ ಕಾಲು ತುಂಡಾಗಿದ್ದು ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಾಗರಾಜ್ ಎಂಬುವರು ಬಲಗಾಲು ಕಳೆದುಕೊಂಡ ಪೊಲೀಸ್ ಸಿಬ್ಬಂದಿ. ಇವರು ಕಡೂರಿನ ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಯಶವಂತಪುರ-ಶಿವಮೊಗ್ಗ ರೈಲಿನಲ್ಲಿ ಕಡೂರಿನಿಂದ ನಾಗರಾಜ್ ಶಿವಮೊಗ್ಗಕ್ಕೆ ಆಗಮಿಸಿದ್ದರು. ವಿದ್ಯಾನಗರ ನಿಲ್ದಾಣದಲ್ಲಿ ಇಳಿಯುವಾಗ ಆಯತಪ್ಪಿ ಅದೇ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡಿದ್ದಾರೆ. ತಕ್ಷಣವೇ ನಾಗರಾಜ್ ಅವರನ್ನು ರಕ್ಷಿಸಿದ ಸಹ ಪ್ರಯಾಣಿಕರು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶಿವಮೊಗ್ಗ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.