ಕೆರೂರ: ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಬಗ್ಗೆ ಅರಿವು ನೀಡುವ ಜತೆಗೆ ಪ್ರಕರಣಗಳಿಗೆ ಸ್ಥಳದಲ್ಲಿ ಪರಿಹಾರ ಒದಗಿಸುವುದೆ ಗ್ರಾಮ ವಾಸ್ತವ್ಯದ ಉದ್ದೇಶವಾಗಿದೆ ಎಂದು ಕೆರೂರ ಠಾಣಾಧಿಕಾರಿ ಭೀಮಪ್ಪ ರಬಕವಿ ಹೇಳಿದರು.
ರಡ್ಡೇರ ತಿಮ್ಮಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತಿಚಿನ ದಿನಗಳಲ್ಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಜೂಜಾಟ, ಮಟಕಾ, ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಉದ್ದೇಶದಿಂದ ಪೋಲೀಸ್ ಇಲಾಖೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಯಾವುದೇ ಅಹಿತಕರ ಘಟನೆ ನಡೆದರೆ 112ಕ್ಕೆ ಕರೆಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಎಎಸ್‌ಐ ಶಿವಾಜಿ ಲಮಾಣಿ, ಸಿದ್ದು ದಳವಾಯಿ, ಎಂ.ಆರ್. ಹೊನ್ನಾನಾಯಕ, ಎಸ್.ಬಿ. ಮದಕಟ್ಟಿ, ಅರ್ಜುನ ಭಜಂತ್ರಿ, ಹನಮಂತಗೌಡ ಗೌಡರ ಮತ್ತಿತರರಿದ್ದರು.