ಸಿರವಾರ: ಹರವಿ ಬಳಿ ಶನಿವಾರ ಪೊಲೀಸರ ಸೋಗಿನಲ್ಲಿ ಬೈಕ್‌ನಲ್ಲಿ ಬಂದು ಇಬ್ಬರು, ಬೈಕ್ ಸವಾರನ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಹಳ್ಳಿಹೊಸೂರು ಗ್ರಾಮದ ಆದೆಪ್ಪಗೌಡ ಮಾನ್ವಿಯಿಂದ ಹಿಂದಿರುಗುವಾಗ ಇಬ್ಬರು ಬೈಕ್ ಸವಾರರು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಹರವಿ ಗ್ರಾಮದ ಬಳಿ ಆದೆಪ್ಪಗೌಡ ಅವರನ್ನು ತಡೆದ ಅಪರಿಚಿತರು, ನಾವು ಪೊಲೀಸರಾಗಿದ್ದು, ಸುತ್ತಮುತ್ತ ಕಳ್ಳತನ ಹೆಚ್ಚಾಗಿವೆ. ಬಂಗಾರದ ಆಭರಣಗಳನ್ನು ಈ ರೀತಿ ಧರಿಸಬಾರದು ಎಂದು ಎಚ್ಚರಿಕೆ ನೀಡಿ, ಅವರ ಚಿನ್ನಾಭರಣಗಳನ್ನು ಚೀಲದಲ್ಲಿ ಹಾಕಿದಂತೆ ಮಾಡಿ, 25 ಗ್ರಾಂ ಸರ ಮತ್ತು ಏಳು ಗ್ರಾಂ ಉಂಗುರವನ್ನು ಕದ್ದು ಪರಾರಿಯಾಗಿದ್ದಾರೆ.
ಆದೆಪ್ಪಗೌಡ ಬಳಿಕ ಚೀಲ ನೋಡಿಕೊಂಡಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಘಟನೆ ನಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೆನೆ. ಎರಡು ದಿನದ ಬಳಿಕ ಬನ್ನಿ ಎಂದು ಹೇಳಿದ್ದಾರೆ ಎಂದು ಆದೆಪ್ಪಗೌಡ ತಿಳಿಸಿದ್ದಾರೆ.