ಜಮಖಂಡಿ:ಪೊಲೀಸ್ರೊಂದಿಗೆ ಒಳ್ಳೆ ಒಡನಾಟದೊಂದಿಗೆ ಇದ್ದು ಬೈಕ್ ಕಳ್ಳತನ ಮಾಡುತಿದ್ದ ಚಾಲಾಕಿ ಬೈಕ್ ಕಳ್ಳನನ್ನ ಜಮಖಂಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರ ಹಾಗೂ ಗ್ರಾಮಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತಿದ್ದ ಆರೋಪಿ ತಾಲೂಕಿನ ಇನಾಂ ಹಂಚಿನಾಳ ಪುನರ್ವಸತಿ ಕೇಂದ್ರದ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿಯನ್ನು ಪೊಲೀಸ್ರು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.
ನಗರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 10 ಲ ರೂ. ಮೌಲ್ಯದ 22 ಬೆಕ್ಗಳನ್ನು ಆರೋಪಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್ ಕಳ್ಳತನ ಬಗ್ಗೆ ಪೊಲೀಸ್ರಿಗೆ ಸಂಶಯ ಬರಬಾರದೆಂದು ಆರೋಪಿ ಸಿದ್ದು ಉಪ್ಪಲದಿನ್ನಿ ಪೊಲೀಸ್ರೊಂದಿಗೆ ಒಳ್ಳೆ ಒಡನಾಟದಿಂದ ಇರುತಿದ್ದ ಅವನ ನಡುವಳಿಕೆಯಲ್ಲಿ ಸಂದೇಹ ಪಟ್ಟ ಪೊಲೀಸರು ತನಿಖೆ ನಡೆಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ.
ನಗರದ ಕೋಷ್ಠಿ ಗಲ್ಲಿಯ ನಿವಾಸಿ ಅಪ್ಪಾಸಾಹೇಬ ಬಿರಾದಾರ ಅವರು ಜೂನ್ 9 ರಂದು ಕೂಂಚನೂರ ಸರ್ಕಲ್ಬಳಿ ಬೈಕ್ ಕಳ್ಳತನವಾದ ಬಗ್ಗೆ ನಗರ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ಅಧೀಕ (ಅಪರಾಧ) ಮಹಾಂತೇಶ್ವರ ಜಿದ್ದಿ, ಡಿವೈಎಸ್ಪಿ ಎಸ್ ರೋಷನ್ ಜಮೀರ್ ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ಪಿಎಸ್ಐ ಅನಿಲ್ ಕುಂಬಾರ, ಅಪರಾಧ ವಿಭಾಗದ ಪಿಎಸ್ಐ ಎನ್.ಕೆ.ಕಾಜಗಾರ, ಸಿಬ್ಬಂದಿಗಳಾದ ಸಂಗಪ್ಪ ಕೋಟಿ, ಪರಶುರಾಮ ಘಾಟಗೆ, ಪ್ರಕಾಶ ಹೊಸಮನಿ, ಮುತ್ತಪ್ಪ ಮಾಂಗ, ಮಲ್ಲಿಕಾರ್ಜುನ ತಂಬಾಕದ, ಸಿದ್ದು ಕಲಾಠಿ, ನಾಗರಾಜ ಬಿಸಲದಿನ್ನಿ, ಶಂಕರ ಆಸಂಗಿ, ಐ.ಎಂ. ಪೆಂಡಾರಿ, ರಾಜಶೇಖರ ಮನಗೂಳಿ ತಂಡ ಕಾರ್ಯಾಚರಣೆ ನಡೆಸಿದ್ದರು. ಕಳ್ಳತನ ಬೇಧಿಸಿದ ಇಲಾಖೆ ಸಿಬ್ಬಂದಿಗಳಿಗೆ ಎಸ್ಪಿ ಸಿದ್ದಾರ್ಥ ಗೋಯಲ್ ಬಹುಮಾನ ೂಷಿಸಿದ್ದಾರೆ.
ಜಮಖಂಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನವಾಗಿದ್ದ ಬೈಕ್ಗಳನ್ನು ಪೊಲೀಸ್ರು ವಶಕ್ಕೆ ಪಡೆದುಕೊಂಡಿರುವುದು.