ಜಿಲ್ಲೆ

ಕುಖ್ಯಾತ ದರೋಡೆಕೋರನಿಗೆ ಪೊಲೀಸ್ ಗುಂಡೇಟು

 ಜಾಪುರ ಗುಡ್ಡದ ಬಳಿ ಬಂಧಿಸಲು ಹೋಗಿದ್ದಾಗ ದಾಳಿ ಮಾಡಿ ಪರಾರಿಗೆ ಯತ್ನ | ಹತ್ತಾರು ಕಡೆ ಸುಲಿಗೆ ಮಾಡಿದ್ದ ಇಮ್ತಿಯಾಜ್ ವಿರುದ್ಧ 10ಕ್ಕೂ ಹೆಚ್ಚಿನ ಕೇಸ್‌ಗಳಿವೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ನಗರದ ಸುತ್ತಲಿನ ಹಾಗೂ ಹೊರ ವಲದಯಲ್ಲಿ ಓಡಾಡುತ್ತಿದ್ದವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ದರೋಡೆಕೋರನಿಗೆ ಪೊಲೀಸರು ಮಂಗಳವಾರ ಸಂಜೆ ಗುಂಡೇಟು ಹೊಡೆದು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಕಲಬುರಗಿಯಲ್ಲಿ ಮತ್ತೊಮ್ಮೆ ಖಾಕಿ ಕಾಡತೂಸು ಸದ್ದು ಮಾಡಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಎAಎಸ್‌ಕೆ ಮಿಲ್ ಪ್ರದೇಶದ ಜಿಲಾನಾಬಾದ ಪ್ರದೇಶದ ನಿವಾಸಿಯಾಗಿರುವ ಇಮ್ತಿಯಾಜ್ ಮಕ್ಬೂಲ್ ಗಿಣಿ (೨೯) ಎಂಬಾತನೇ ಪೊಲೀಸರಿಂದ ಗುಂಡೇಡು ತಿಂದು ಆಸ್ಪತ್ರೆ ಸೇರಿದ ದರೋಡೆಕೋರ. ಇತನ ವಿರುದ್ಧ ೧೦ಕ್ಕೂ ಹೆಚ್ಚಿನ ಕೇಸ್‌ಗಳಿವೆ. ತಂಡವೊAದನ್ನು ಕಟ್ಟಿಕೊಂಡು ಸುಲಿಗೆ ಮಾಡುವ ಕೆಲಸ ಮಾಡುತ್ತಿದ್ದ. ಕಲಬುರಗಿಯ ಉಪನಗರ, ಸ್ಟೇಷನ್ ಬಜಾರ,ಆರ್‌ಜಿ ನಗರ ಇನ್ನಿತರ ಠಾಣೆಗಳಲ್ಲಿ ಹಾಗೂ ನೆರೆಯ ಹೈದರಾಬಾದನಲ್ಲಿಯೂ ಸಹ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸಬ್ ಅರ್ಬನ್ ಠಾಣೆಯ ದರೋಡೆ ಪ್ರಕರಣವನ್ನು ಪತ್ತೆ ಮಾಡಲು ರಚಿಸಿದ್ದ ವಿಶೇಷ ತಂಡದವರು ಮಾಹಿತಿಯಂತೆ ನಗರದ ಕುಸನೂರ ಬಳಿಯ ಜಾಪುರ ಗುಡ್ಡದ ಪ್ರದೇಶದಲ್ಲಿ ಬಂಧಿಸಲು ತೆರಳಿದ್ದಾಗ, ಪೊಲೀಸರ ಮೇಲೆ ಮಾರಕಾಸ್ತçಗಳಿಂದ ದಾಳಿ ಮಾಡಿದ್ದಾನೆ. ಸುಮ್ಮನೆ ಶರಣಾಗಲು ಸೂಚಿಸಿದರೂ, ಅವರ ಮೇಲೆ ಮತ್ತೊಮ್ಮೆ ದಾಳಿ ಮಾಡಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಪಿಎಸ್‌ಐ ಬಸವರಾಜ ತಮ್ಮ ಹಾಗೂ ಸಿಬ್ಬಂದಿ ಆತ್ಮ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದಕ್ಕೂ ಜಗ್ಗದಿದ್ದಾಗ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕಾಲಿಗೆ ಗುಂಡೇಟು ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆಕೋರರನ್ನು ಪತ್ತೆ ಮಾಡಲು ಸಬ್ ಅರ್ಬನ್ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ, ವಿಶ್ವವಿದ್ಯಾಲಯ ಠಾಣೆಯ ಇನ್‌ಸ್ಪೆಕ್ಟರ್ ಸುಶೀಲಕುಮಾರ, ಉಪನಗರ ಠಾಣೆಯ ಪಿಎಸ್‌ಐ ಬಸವರಾಜ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಿ ಶೋಧ ಮಾಡುವ ಕೆಲಸ ಮಾಡುತ್ತಿದ್ದರು. ಈ ವೇಳೆಯಲ್ಲಿ ಇಮ್ತಿಯಾಜ್ ಜಾಪುರ ಗುಡ್ಡದ ಬಳಿ ದುಷ್ಕೃತ್ಯ ನಡೆಸಲು ಹೊಂಚು ಹಾಕಿದ್ದಾನೆ ಎಂಬ ಮಾಹಿತಿಯಂತೆ ಬಸವರಾಜ ಹಾಗೂ ತಂಡದವರು ಅಲ್ಲಿಗೆ ತೆರಳಿದ್ದರು. ಆಗ ಪೊಲೀಸರ ಮೇಲೆ ದರೋಡೆಕೋರ ದಾಳಿ ಮಾಡಿದ್ದಾನೆ. ದರೋಡೆಕೋರನ ದಾಳಿ ನಡೆಸಿದ್ದರಿಂದ ಉಪನಗರ ಠಾಣೆಯ ಪೊಲೀಸ್ ಸಿಬ್ಬಂದಿ ವಿಠ್ಠಲ್ ಮತ್ತು ಫಿರೋಜ್ ಎಂಬುವರಿಗೆ ಗಾಯಗಳಾಗಿದ್ದು ಅವರನ್ನು ಹಾಗೂ ಗುಂಡೇಟು ತಿಂದು ಗಾಯಗೊಂಡ ಇಮ್ತಿಯಾಜ್‌ನ್ನು ಪೊಲೀಸರು ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.,ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಎಸಿಪಿ ರಾಜಣ್ಣ ಜಿ.ಡಿ., ಇನ್‌ಸ್ಪೆಕ್ಟರ್‌ಗಳಾದ ಸಂತೋಷ ತಟ್ಟೆಪಳ್ಳಿ, ಸುಶೀಲಕುಮಾರ ಮತ್ತಿತರರು ಭೇಟಿ ನೀಡಿದರು. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಹೊರವಲಯದಲ್ಲಿ ಒಂಟಿಯಾಗಿ ಓಡಾಡುವರನ್ನು, ಜೋಡಿಯಾಗಿ ತಿರುಗಾಡುತ್ತಿರುವನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಇಮ್ತಿಯಾಜ್‌ನನ್ನು ಸೆರೆ ಹಿಡಿಯಲು ವಿಶೇಷ ತಂಡ ರಚಿಸಲಾಗಿತ್ತು. ಮಾಹಿತಿಯಂತೆ ಜಾಪುರ ಗುಡ್ಡದ ಬಳಿ ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆ ಮಾರಕಾಸ್ತçಗಳಿಂದ ದಾಳಿ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಪಿಎಸ್‌ಐ ಬಸವರಾಜ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. | ಡಾ.ಶರಣಪ್ಪ ಎಸ್.ಡಿ. ಪೊಲೀಸ್ ಆಯುಕ್ತ ===