ಜಿಲ್ಲೆ

ಜಮೀನಿನಲ್ಲಿ ಬೆಳೆದಿದ್ದ 8 ಕೆ.ಜಿ. ಗಾಂಜಾ ವಶ

Haveri - Kariyappa Aralikatti

ಹಾವೇರಿ: ಜಮೀನುವೊಂದರಲ್ಲಿ ಬೆಳೆದಿದ್ದ 12 ಸಾವಿರ ರೂ. ಮೌಲ್ಯದ 8 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನೀಲವ್ವ ತಿಪ್ಪಣ್ಣ ತಳ್ಳಳ್ಳಿ ಇವರ ಕುಟುಂಬದ ಜಮೀನಿನ ವಾರಸುದಾರರು ತಮ್ಮ ರೇಷ್ಮೆ ಬೆಳೆ ಗಿಡಗಳ ನಡುವೆ ಗಾಂಜಾ ಬೆಳೆದಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.