ಬೈಲುಕುಪ್ಪೆ: ಇಲ್ಲಿನ ಬಿ.ಎಂ.ರಸ್ತೆಯಲ್ಲಿ ಇತ್ತೀಚೆಗೆ ಕಳೆದು ಹೋಗಿದ್ದ ಮೊಬೈಲನ್ನು ಬೈಲುಕುಪ್ಪೆ ಪೊಲೀಸರು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ, ವಾರಸುದಾರರಿಗೆ ಮರಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮದ ಶಿವಣ್ಣ ಅವರ ಮೊಬೈಲ್ ಕೆಲವು ದಿನಗಳ ಹಿಂದೆ ಬೈಲುಕುಪ್ಪೆಯ ಬಿ.ಎಂ.ರಸ್ತೆಯಲ್ಲಿ ಕಾಣೆಯಾಗಿತ್ತು. ತಕ್ಷಣ ಬೈಲುಕುಪ್ಪೆ ಪೊಲೀಸ್ ಠಾಣಾಧಿಕಾರಿ ರವಿಕುಮಾರ್ ಅವರಿಗೆ ದೂರು ನೀಡಿದ್ದರು. ಪೊಲೀಸರು ಮೊಬೈಲನ್ನು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ, ಅದನ್ನು ವಶಕ್ಕೆ ಪಡೆದು ಶಿವಣ್ಣ ಅವರಿಗೆ ಹಸ್ತಾಂತರಿಸಿದರು. ಠಾಣಾಧಿಕಾರಿ ರವಿಕುಮಾರ್ ಮತ್ತು ಸುರೇಶ್ ಇದ್ದರು.