ಜಿಲ್ಲೆ

ರೌಡಿಶೀಟರ್​ ಮನೆಗಳ ಮೇಲೆ ಪೊಲೀಸ್​ ದಾಳಿ

ಬೈಲಹೊಂಗಲ: ಅಪರಾಧ ತಡೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ಪೋಲೀಸರು ಶನಿವಾರ ರೌಡಿಶೀಟರ್​ಗಳ ಮನೆ ಪರಿಶೀಲಿಸಿ ಖಡಕ್​ ಎಚ್ಚರಿಕೆ ನೀಡಿದರು. ಡಿವೈಎಸ್​ಪಿ ಡಾ.ವೀರಯ್ಯ ಹಿರೇಮಠ, ಸಿಪಿಐ ಪಿ.ಎ.ಸಾಲಿಮಠ ನೇತೃತ್ವದಲ್ಲಿ ಪಿಎಸ್​ಐಗಳಾದ ಎ್​.ವೈ.ಮಲ್ಲೂರ, ಪಿ.ವೈ. ವಾಲೀಕಾರ ಹಾಗೂ ಸಿಬ್ಬಂದಿ ರೌಡಿಶೀಟರ್​ಗಳ ಮನೆಗಳಲ್ಲಿ ತಪಾಸಣೆ ನಡೆಸಿದರು. ಪಟ್ಟಣದಲ್ಲಿ ಒಟ್ಟು 40 ರೌಡಿಶೀಟರ್​ಗಳಿದ್ದ್ದು, 20 ಕ್ಕಿಂತ ಅಧಿಕ ರೌಡಿಶೀಟರ್​ಗಳ ಮನೆಗಳಲ್ಲಿ ಶೋಧ ನಡೆಸಿದ ಪೊಲೀಸರು, ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಪದೇ ಪದೆ ದುಷತ್ಯಗಳಲ್ಲಿ ಭಾಗಿಯಾಗುತ್ತಿರುವ ಟನೆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಯಾವುದೇ ಮಾರಕಾಸ್ತ್ರ ಪತ್ತೆಯಾಗಿಲ್ಲ ಎಂದು ಪೋಲಿಸ್​ ಮೂಲಗಳು ತಿಳಿಸಿವೆ.