ಜಿಲ್ಲೆ

ಮಂಗಳೂರು ನಗರದಲ್ಲಿತ್ತೊಂದು ವೇಶ್ಯಾವಾಟಿಕೆ ಅಡ್ಡೆ- ಇಬ್ಬರು ಯುವತಿಯರನ್ನು ರಕ್ಷಿಸಿದ ಪೊಲೀಸರು

reportermng

ಮಂಗಳೂರು: ನಗರದ ವೆಲೆನ್ಸಿಯಾದಲ್ಲಿ ಅಪಾರ್ಟ್‌ಮೆಂಟ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

ಇನ್ಸ್‌ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಗಣೇಶ್, ಅಪಾರ್ಟ್‌ಮೆಂಟ್ ಮಾಲೀಕ ಅಫೀಜ್ ಹಾಗು ಸಹಕರಿಸುತ್ತಿದ್ದ ಆರೋಪದಲ್ಲಿ ಹರಿಣಾಕ್ಷಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದಿನ ತನಿಖೆಗೆ ಮಹಿಳಾ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.