ಜಿಲ್ಲೆ

ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ ಹಲವರು ವಶಕ್ಕೆ

ಗಂಗಾಧರ ಬಿ ವಿ

ರಾಮನಗರ: ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಗಚಗೆರೆ ಬಳಿಯ ಹೋಂ‌ ಸ್ಟೇ ಒಂದರ ಮೇಲೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪಾರ್ಟಿಯಲ್ಲಿದ್ದ 150ಕ್ಕೂ ಹೆಚ್ಚು ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ತಗಚಗೆರೆ ಬಳಿಯ ಆಯಾನ್ ಹೋಂ ಸ್ಟೇಯಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿದ್ದ ಬಹುತೇಕರು 19-23 ವರ್ಷದೊಳಗಿನವರಾಗಿದ್ದಾರೆ. ನಿಷೇಧಿತ‌ ಮಾದಕವಸ್ತುಗಳನ್ನು ಸೇವಿಸಿರುವ ಅನುಮಾನ ಇರುವುದರಿಂದ‌ ಎಲ್ಲರನ್ನೂ ರಾಮನಗರದಲ್ಲಿರುವ ಜಿಲ್ಲಾಸ್ಪತ್ರಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.

ಜೆನ್‌ಜೀ ಎಂಬ ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಂಡು ಪಾರ್ಟಿ ಆಯೋಜಿಸಲಾಗಿದೆ. ಭಾಗಿಯಾಗಿರುವವರಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ‌. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.