ಜಿಲ್ಲೆ

ಇಲೆಕ್ಟ್ರಿಕ್ - ಪರ್ಮಿಟ್ ಆಟೋರಿಕ್ಷಾ ಚಾಲಕರ ಒಳ ಸಮರ, ಪೊಲೀಸ್ ಆಯುಕ್ತರ ಫೋನ್‌ಇನ್‌ನಲ್ಲಿ ಅಳಲು

ಹರೀಶ ಎಂ.

ಮಂಗಳೂರು: ನಗರದಲ್ಲಿ ಇಲೆಕ್ಟ್ರಿಕ್ ಆಟೋರಿಕ್ಷಾಗಳ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದ್ದು, ಇದರಿಂದ ಪರವಾನಗಿ ಪಡೆದ ಆಟೋ ರಿಕ್ಷಾಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಪರಸ್ಪರ ಸಮರಕ್ಕೆ ಕಾರಣವಾಗುತ್ತಿದ್ದು, ಇಲೆಕ್ಟ್ರಿಕ್ ಆಟೋಗಳಿಗೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಶುಕ್ರವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್‌ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.


ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪ್ರತಿಕ್ರಿಯಿಸಿ, ನಗರದಲ್ಲಿ ಉಭಯ ಆಟೋರಿಕ್ಷಾಗಳ ಸಮಸ್ಯೆ ಬಗ್ಗೆ ವರದಿಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಬಿಕ್ಕಟ್ಟು ಶಮನಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು-ಸಾರಿಗೆ ಅಧಿಕಾರಿಗಳು ಇನ್ನೊಂದು ಸುತ್ತಿನ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದರು


ಕೇಂದ್ರ ಸರ್ಕಾರ ಹಾಗೂ ಹಸಿರುಪೀಠದ ಪರಿಸರ ಮಾಲಿನ್ಯ ತಡೆಗಟ್ಟುವ ಆದೇಶ ಹಿನ್ನೆಲೆಯಲ್ಲಿ ಇ ಆಟೋಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಹಿಂದಿನ ಜಿಲ್ಲಾಧಿಕಾರಿಗಳು ಹೆಚ್ಚಿನ ಇ ಆಟೋಗಳ ಸಂಚಾರಕ್ಕೆ ಮಿತಿ ವಿಧಿಸಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಪರಿಸರಸ್ನೇಹಿ ಆಟೋಗಳಿಗೆ ನಿಬರ್ಂಧ ವಿಧಿಸುವುದು ಬರುವುದಿಲ್ಲ. ಹಾಗಾಗಿ ಹೊಂದಾಣಿಕೆಯಿಂದ ಈ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕಾಗಿದೆ ಎಂದರು.


ನಗರದ ಕಂಕನಾಡಿ, ಕೇಂದ್ರ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಸ್ತೆ ಮೇಲೆ ಬೀದಿಬದಿ ವ್ಯಾಪಾರ ನಡೆಯುತ್ತಿದೆ. ತಳ್ಳು ಗಾಡಿಗಳ ವ್ಯಾಪಾರಸ್ಥರು ಅಲ್ಲೇ ಪಕ್ಕದಲ್ಲಿ ಕುರ್ಚಿ ಹಾಕಿ ಕುಳಿತುಕೊಳ್ಳುತ್ತಾರೆ. ಇದರಿಂದ ಪಾದಚಾರಿ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರೊಬ್ಬರು ಆಗ್ರಹಿಸಿದರು.


ನಗರದಲ್ಲಿ ಫುಟ್‌ಪಾತ್ ಒತ್ತುವರಿ ಹಾಗೂ ವಾಹನಗಳ ಪಾಕಿರ್ಂಗ್ ಉಲ್ಲಂಘನೆಗೆ ಸಂಬಂಧಿಸಿ ಸೂಕ್ತ ಕಾರ್ಯಾಚರಣೆ ನಡೆಸಲಾಗುವುದು ಎಂದು ಆಯುಕ್ತರು ಹೇಳಿದರು.
ಕಾಟಿಪಳ್ಳ, ಬೈಕಂಪಾಡಿ, ಮೂಡುಬಿದಿರೆ, ಕಡಂದಲೆ, ಮೂಲ್ಕಿ ಮತ್ತಿತರ ಕಡೆಗಳಲ್ಲಿ ಅಡ್ಡಾದಿಡ್ಡಿ ಪಾಕಿರ್ಂಗ್ ಮಾಡುತ್ತಿದ್ದಾರೆ. ಅಲ್ಲದೆ ಮಕ್ಕಳು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ. ಅತ್ತಾವರದಲ್ಲಿ ನೋ ಎಂಟ್ರಿ ಫಲಕ ನಾಪತ್ತೆಯಾಗಿದೆ. ಟಿ.ವಿ.ರಮಣ ಪೈ ಹಾಲ್‌ನಿಂದ ಕಾರ್‌ಸ್ಟ್ರೀಟ್‌ಗೆ ಹೋಗುವಲ್ಲಿ 90 ಡಿಗ್ರಿ ತಿರುವು ಇದ್ದು, ಆಗಾಗ ಅಪಘಾತ ಸಂಭವಿಸುತ್ತಿರುತ್ತದೆ. ಮೂಲ್ಕಿ ಬಸ್ ತಂಗುದಾಣದ ಬಳಿ ವಾಹನ ದಟ್ಟಣೆಯಿಂದಾಗಿ ರಸ್ತೆ ದಾಟಲು ಸಾಧ್ಯವಾಗುತ್ತಿಲ್ಲ ಎಂಬಿತ್ಯಾದಿ ಸಮಸ್ಯೆಗಳು ಕೇಳಿಬಂತು.


ಮಂಗಳೂರಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು. ಫುಟ್‌ಪಾತ್ ಅತಿಕ್ರಮಣ, ನೋಂ ಪಾಕಿರ್ಂಗ್‌ಗಳಲ್ಲಿ ನಿಲುಗಡೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ವಾಹನ ದಟ್ಟಣೆ ಇರುವಲ್ಲಿ ಸಂಚಾರಿ ಪೊಲೀಸರನು ನಿಯೋಜಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಕಾರುಗಳಲ್ಲಿ ಟಿಂಟ್ ಗ್ಲಾಸ್ ಅಳವಡಿಕೆಗೆ ಅವಕಾಶ ಇಲ್ಲ. ಅವುಗಳ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುವುದು. ಟಿಂಟ್ ಗ್ಲಾಸ್ ಕಾರುಗಳಿಗೆ ದಂಡ ವಿಧಿಸುವುದು ಮಾತ್ರವಲ್ಲ ಟಿಂಟ್ ಗ್ಲಾಸ್ ಸ್ಥಳದಲ್ಲೇ ತೆರವುಗೊಳಿಸಲು ಸೂಚಿಸಲಾಗುವುದು ಎಂದರು.


ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್, ಸಂಚಾರಿ ಎಸಿಪಿ ನಝ್ಮ ಫಾರೂಕಿ ಮತ್ತಿತರರಿದ್ದರು.