ಸರಗೂರು ತಾಲೂಕಿನ ಪಟ್ಟಣದ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಕುಟುಂಬದವರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. 
ಜಿಲ್ಲೆ

ಪೊಲೀಸ್ ಸಿಬ್ಬಂದಿ ಆರೋಗ್ಯದತ್ತ ಕಾಳಜಿ ವಹಿಸಲಿ

ಸರಗೂರು: ಸದಾ ಒತ್ತಡದಲ್ಲಿರುವ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಸರಗೂರು ಪೋಲಿಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಆರ್.ಕಿರಣ್ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ನಾರಾಯಣಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಾಯದೊಂದಿಗೆ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.

ಜನರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಪೊಲೀಸರು ತಮ್ಮ ಆರೋಗ್ಯದ ಕಾಳಜಿ ಬಗ್ಗೆ ಹೆಚ್ಚಿನ ಒತ್ತು ನೀಡುವುದಿಲ್ಲ. ಹಾಗಾಗಿ, ಮೈಸೂರು ಜಿಲ್ಲಾ ಪೋಲೀಸ್ ಇಲಾಖೆ ಅಧಿಕಾರಿಗಳ ಆದೇಶದ ಮೇರೆಗೆ ನಮ್ಮ ಠಾಣೆಯ ಸಿಬ್ಬಂದಿ ಹಾಗೂ ಕುಟುಂಬದವರಿಗೆ ಆರೋಗ್ಯ ತಪಾಸಣೆ ಮಾಡಿಸಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿಗೆ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆಯಾದರೆ ಆರೋಗ್ಯ ಸಮಸ್ಯೆ ತಡೆಯಬಹುದು. ಇದರಿಂದ ಕೆಲಸದಲ್ಲಿ ಉತ್ತಮ ಸಾಧನೆಗೂ ಅನುಕೂಲವಾಗುತ್ತದೆ ಎಂದರು.

ಕ್ರೈಂ ವಿಭಾಗದ ಇನ್‌ಸ್ಪೆಕ್ಟರ್ ಗೋಪಾಲ್, ಎಎಸ್‌ಐ ಕೃಷ್ಣಕುಮಾರ್, ನಾರಾಯಣ್, ಚಂದ್ರ, ಪುರುಷೋತ್ತಮ್, ಶೋಭಾ, ಮಹಾದೇವಮ್ಮ, ಗಣಪತಿ, ದೇವರಾಜು, ಆನಂದ, ಇಮ್ರಾನ್, ವಿನಯ್ ಕುಮಾರ್, ಶಿವರಾಜು, ಕೃಷ್ಣಯ್ಯ, ಜಗದೀಶ್, ಸುನೀಲ್ ಇತರರು ಇದ್ದರು.