ಜಿಲ್ಲೆ

ಸ್ವಯಂಸೇವಕರ ಜತೆ ಪೊಲೀಸರ ಸಭೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಮಳೆಯಿಂದ ಉಂಟಾಗಬಹುದಾದ ಅನಾಹುತವನ್ನು ಎದುರಿಸಲು ಪೊಲೀಸರೊಂದಿಗೆ ಸ್ವಯಂಸೇವಕರು ಸಹ ಕೈಜೋಡಿಸಬೇಕು ಎಂದು ವಿರಾಜಪೇಟೆ ತಾಲೂಕು ಡಿವೈಎಸ್‌ಪಿ ಮಹೇಶ್‌ಕುಮಾರ್ ಹೇಳಿದರು.

ಗೋಣಿಕೊಪ್ಪಲುವಿನಲ್ಲಿ ಗುರುವಾರ ನಡೆದ ಪೊಲೀಸ್ ಠಾಣೆ ಮತ್ತು ಗ್ರಾಮ ಬೀಟ್ ವ್ಯಾಪ್ತಿಯ ಸ್ವಯಂಸೇವಕರ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಮೇ ತಿಂಗಳಲ್ಲಿ ಮಳೆ ಪ್ರಾರಂಭವಾಗಿ ಆಂತಕ್ಕವನ್ನು ಸೃಷ್ಟಿಸಿದೆ, ಮುಂದುವರೆದ ಭಾಗವಾಗಿ ಜುಲೈ ತಿಂಗಳಲ್ಲಿಯೂ ಮಳೆಯ ಪ್ರಮಾಣ ಅಧಿಕವಾಗಬಹುದು, ಈ ಹಿನ್ನೆಲೆ ಹೆಚ್ಚು ಅನಾಹುತಗಳು ಸಂಭವಿಸಬಹುದಾದ ಸಾಧ್ಯತೆಗಳಿವೆ. ಈ ಕರಣ ಪ್ರಕೃತಿ ವಿಕೋಪ ಉಂಟಾದಲ್ಲಿ ಮುನ್ನೆಚ್ಚರಿಕೆಯ ಕ್ರಮ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

ಪೊಲೀಸರ ಈ ಕಾರ್ಯಕ್ಕೆ ಸಹಕಾರವಾಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಯಂಸೇವಕರು ಕೈ ಜೋಡಿಸಬೇಕು. ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ, ಸಾಕಷ್ಟು ಹಳೆಯ ಕಟ್ಟಡಗಳು ಇವೆ ಅವುಗಳು ಶಿಥಿಲಗೊಂಡು ಆತಂಕಕಾರಿ ಸ್ಥಿತಿಯಲಿದೆ. ಈ ವಿಚಾರವಾಗಿ ಸ್ವಯಂಸೇವಕರು ಮುಂಜಾಗೃತೆ ವಹಿಸಬೇಕು ಎಂದರು.

ಪ್ರಕೃತಿ ವಿಕೋಪದ ತುರ್ತು ಸಂದರ್ಭ ಸಾರ್ವಜನಿಕ ರಕ್ಷಣೆಗೆ ಸಿದ್ದರಾಗುವ ಸ್ವಯಂಸೇವಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಸೂಕ್ತ ಸಲಹೆಗಳನ್ನು ಸ್ವಯಂಸೇವಕರಿAದ ಪಡೆಯಲಾಯಿತು.

ತುರ್ತು ಸಂದರ್ಭಗಳಲ್ಲಿ ವಿವಿಧ ಸಂಘಟನೆಯ ಸ್ವಯಂಸೇವಕರು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕ ಸೇವೆ ಮಾಡಲು ಇಚ್ಚಿಸುವವರು ಸ್ಥಳೀಯ ಠಾಣೆ ವ್ಯಾಪ್ತಿಯಲ್ಲಿ ತಮ್ಮ ಹೆಸರು ದೂರವಾಣಿ ಸಂಖ್ಯೆ ನೀಡುವಂತೆ ಮನವಿ ಮಾಡಲಾಯಿತು.

ಗೋಣಿಕೊಪ್ಪಲು ವೃತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್, ಠಾಣಾಧಿಕಾರಿ ಬಿ.ಕೆ. ಪ್ರದೀಪ್ ಕುಮಾರ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸದಸ್ಯರುಗಳಾದ ಬಿ.ಎನ್ ಪ್ರಕಾಶ್, ಅಪ್ಜಲ್ ಮತ್ತು ವಿವಿಧ ಸಂಘಟನೆಯ ಸ್ವಯಂಸೇವಕರು ಸಭೆಯಲ್ಲಿ ಇದ್ದರು.