ಜಿಲ್ಲೆ

ತಾಲೂಕು ಕಚೇರಿ ಆವರಣದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಮಾನಸಿಕ ಅಸ್ವಸ್ಥ!

arunakunigal

ತುಮಕೂರು: ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಹುಚ್ಚಾಟ ಮೆರೆದಿದ್ದು, ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾನೆ.

ಮಧುಗಿರಿಯ ತಾಲೂಕು ಕಚೇರಿ ಅವರಣದಲ್ಲಿ ಸೋಮವಾರ ಸಂಜೆ ಈ ಘಟನೆ ಸಂಭವಿಸಿದ್ದು, ಶೂ ಹಿಡಿದು ಪೊಲೀಸರ ಮೇಲೆರಗಿದ ಮಾನಸಿಕ ಅಸ್ವಸ್ಥನ ವಿಡಿಯೋ ವೈರಲ್ ಆಗಿದೆ.

ತಾಲೂಕು ಕಚೇರಿ ಆವರಣದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿತ್ತು. ಅಲ್ಲಿಗೆ ಬಂದ ಮಧುಗಿರಿಯ ತುಂಗೋಟಿ ನಿವಾಸಿ ರಂಗರಾಜು ಎಂಬಾತ ಪ್ರತಿಭಟನಾನಿರತರಿಂದ ಮೈಕ್ ಕಿತ್ತುಕೊಂಡು ರಂಪಾಟ ಮಾಡಿದ್ದಾನೆ. ಇದನ್ನು ತಡೆಯಲು ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾನೆ. ಕೊನೆಗೆ ಆತನ ಮೇಲೆ ಲಾಠಿ ಬೀಸಿದ ಪೊಲೀಸರು, ಅವನ್ನನ್ನ ಹಿಡಿದು ಆಂಬುಲೆನ್ಸ್ ಮೂಲಕ ನಿಮ್ಹಾನ್ಸ್​ಗೆ ರವಾನಿಸಿದರು. ರಂಗರಾಜು ಮಾನಸಿಕ ಅಸ್ವಸ್ಥ ಎನ್ನಲಾಗಿದೆ.