ಬೆಳಗಾವಿ: ಎರಡು ಸಾವಿರ ರೂ. ಮುಖ ಬೆಲೆಯ ನೋಟು ಬದಲಾಯಿಸಿದರೇ 1ಲಕ್ಷ ರೂ.ನೀಡುವುದಾಗಿ ಆಮಿಷವೊಡ್ಡಿ 5 ಲಕ್ಷ ರೂ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಗವಾಡ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪೊಲೀಸ್ ಕಾನಸ್ಟೇಬಲ್ ಸಾಗರ ಜಾಧವ್, ಆರಿಫ್ ಸಾಗರ, ಲಕ್ಷ್ಮಣ ನಾಯಕ ಬಂಧಿತರು. ಇವರನ್ನು ಜಿಲ್ಲಾ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
500 ಮುಖ ಬೆಲೆಯ 5 ಲಕ್ಷ ರೂ.ನೀಡಿದರೆ 2,000 ಮುಖಬೆಲೆ 6 ಲಕ್ಷ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದರು. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡುಲಕ್ಷಾಂತರ ಖೋಟಾ ನೋಟು ವಶಕ್ಕೆ ಪಡೆದುಕೊಂಡಿದ್ದಾರೆ.