ಬ್ಯಾಡಗಿ: ಪೊಲೀಸ್ ಕಾನಸ್ಟೇಬಲ್ವೊಬ್ಬರ ಮನೆಯ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿದ ಖದೀಮರು ಬರೋಬ್ಬರಿ 5.57 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿದ ಟನೆ ಪಟ್ಟಣದ ನೆಹರು ನಗರದಲ್ಲಿ ನಡೆದಿದೆ.
ಬಸವರಾಜ ಶಂಕ್ರಪ್ಪ ಸಂಕಣ್ಣನವರ (36) ಎಂಬುವರ ಮನೆಯಲ್ಲಿ ಕಳ್ಳತನವಾಗಿರುವುದು.
ಇವರ ಮನೆಯ ಬಾಗಿಲದ ಬೀಗವನ್ನು ಮುರಿದು ಒಳಗೆ ನುಗ್ಗಿದ ಖದೀಮರು 113 ಗ್ರಾಂ ಚಿನ್ನಾಭರಣ, 390 ಗ್ರಾಂ ಬೆಳ್ಳಿ ಆಭರಣ ಹಾಗೂ 1.40 ಲಕ್ಷ ರೂ. ಹಣ ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.