ಮಂಡ್ಯ: ಪೊಲೀಸ್ ಠಾಣೆಗೆ ಬಂದ ದೂರಗಳನ್ನು ಪರಿಗಣಿಸಿ ಕೆಲಸ ಮಾಡುವುದರ ಜತೆಗೆ ನೊಂದವರಿಗೆ ಪರಿಹಾರ ಕೊಡಿಸಬೇಕು ಎಂದು ನಿವೃತ್ತ ಎಸ್‌ಐ ಎಚ್.ಎಸ್.ರಮೇಶ್ ಕಿವಿಮಾತು ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿದರು. ಅಮಾಯಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವ ಕೆಲಸ ಮಾಡಿದಾಗ ಸಮಾಜದಲ್ಲಿ ಪೊಲೀಸ್ ಇಲಾಖೆಗೆ ಗೌರವ ಹಾಗೂ ಒಳ್ಳೆಯ ಭಾವನೆ ಬರುತ್ತದೆ. ನಮ್ಮ ವೃತ್ತಿಯನ್ನು ಮೈಗೂಡಿಸಿಕೊಂಡು ಯಶಸ್ಸು ಗಳಿಸಬೇಕು. ಸಮಾಜ ಒಳ್ಳೆಯ ಸ್ಥಿತಿಯಲ್ಲಿದೆ ಎಂದರೆ ಅದಕ್ಕೆ ಇಲಾಖೆ ಕಾರಣ. ಪೊಲೀಸರು ಸಮಾಜದ ಆಧಾರದ ಸ್ಥಂಭದಂತೆ. ಶ್ರದ್ಧೆಯಿಂದ ನಾವು ಕೆಲಸ ಮಾಡಿದರೆ ಇಲಾಖೆಗೆ ಗೌರವ ತರಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್ಪಿ ಸಿ.ಇ.ತಿಮ್ಮಯ್ಯ, ಡಿಎಆರ್ ಡಿವೈಎಸ್ಪಿ ಎಸ್.ರಾಚಯ್ಯ ಇದ್ದರು. ಇದೇ ವೇಳೆ ನಿವೃತ್ತ ಎಸ್‌ಐ ಎಚ್.ಎಸ್.ರಮೇಶ್ ಅವರು ತೆರೆದ ವಾಹನದಲ್ಲಿ ಪರಿವೀಕ್ಷಣೆ ನಡೆಸಿದರು. ಅಂತೆಯೇ ಪೊಲೀಸ್ ಧ್ವಜದ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು.