ಜಿಲ್ಲೆ

ಪೊಲೀಸ್ ಕರ್ತವ್ಯ ಕೂಟ ‘ಮಾಯಾ’ ಪ್ರಥಮ!

ಜಗದೀಶ ಹೊಂಬಳಿ
ಬೆಳಗಾವಿ: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟ-2024 ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯ ಸ್ಫೋಟಕ ಪತ್ತೆ ವಿಭಾಗದ ಶ್ವಾನ ‘ಮಾಯಾ’ ಪ್ರಥಮ ಸ್ಥಾನ ಪಡೆದಿದೆ. ಸಿಬ್ಬಂದಿ ಎಂ. ಯಮರ್ಗ ಮತ್ತು ಮಂಜು ಕಳಸವಣ್ಣವರ ಮಾಯಾ ಶ್ವಾನವನ್ನು ನಿರ್ವಹಣೆ ಮಾಡಿದ್ದಾರೆ. ಬೆಳಗಾವಿ ನಗರ ಪೊಲೀಸ್ ಇಲಾಖೆಯ ರೋಜಿ ಶ್ವಾನವು ಅಪರಾಧ ವಿಭಾಗದಲ್ಲಿ ಸಿಬ್ಬಂದಿ ರುದ್ರಯ್ಯ ಮಾವಿನಕಟ್ಟಿ ಮತ್ತು ಸಂತೋಷ ಪಾಟೀಲ ಅವರ ನಿರ್ವಹಣೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಬೆಳಗಾವಿ ಪೊಲೀಸ್ ಇಲಾಖೆಗೆ ಹೆಸರು ತಂದಿದೆ.