ಜಿಲ್ಲೆ

ಕಳ್ಳಬೇಟೆಗಾರರಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ "ರಾಣಾ" ಇನ್ನಿಲ್ಲ...

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಅಪರಾಧ, ಕಳ್ಳಬೇಟೆಗಾರರನ್ನು ಪತ್ತೆ‌ ಮಾಡುವಲ್ಲಿ ನಿಪುಣನಾಗಿದ್ದ ಶ್ವಾನ "ರಾಣಾ" ಮಂಗವಾರ ಬೆಳಗ್ಗೆ ನಿಧನ ಹೊಂದಿದೆ.

ಸುಮಾರು 10 ವರ್ಷದ. ಜರ್ಮನ್ ಶಫರ್ಡ್ ತಳಿಯ ನಾಯಿ ರಾಣಾ ವಯೋ‌ಸಹಜವಾಗಿ ಮೃತಪಟ್ಟಿದೆ. ರಾಣಾ ಹಲವು ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚಿ ಕಳ್ಳಬೇಟೆಗಾರರಿಗರ ಸಿಂಹ ಸ್ವಪ್ನವಾಗಿತ್ತು.

ವಯಸ್ಸಾದ ಕಾರಣ ನಿವೃತ್ತಿ ಕೊಡಲು ಅರಣ್ಯ ಇಲಾಖೆ ಚಿಂತನೆ ನಡೆಸಿತ್ತು. ಸೋಮವಾರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದ ಶ್ವಾನ ರಾಣಾ.

ಹುಲಿ ಕೊಂದವರು, ಮರ ಕಡಿದವರು, ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಪರಾಕ್ರಮ ತೋರಿದ್ದ ರಾಣಾ. ತನ್ನ ಸಾಹಸಗಳಿಂದಲೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಹಂಟರ್.‌ ಬಂಡೀಪುರ ಸಫಾರಿ ಕೌಂಟರ್ ಸಮೀಪ ರಾಣಾ ಪಾರ್ಥಿವ ಶರೀರವಿದ್ದು, ಗೌರವ ಸಮರ್ಪಿಸಿ ಅಂತ್ಯಕ್ರಿಯೆಗೆ ತೀರ್ಮಾನ ಮಾಡಲಾಗಿದೆ.