ಜಿಲ್ಲೆ

ಸತ್ಯ ದರ್ಶನ ಸಭೆ ಹಿನ್ನೆಲೆಯಲ್ಲಿ ಮೂರು ಸಾವಿರ ಮಠಕ್ಕೆ ಪೊಲೀಸರ ಸರ್ಪಗಾವಲು

kumarvrl

ಹುಬ್ಬಳ್ಳಿ: ಮೂರು ಸಾವಿರ ಮಠದ ಉತ್ತರಾಧಿಕಾರಿ ವಿಚಾರದ ಹಿನ್ನೆಲೆಯಲ್ಲಿ ನಡೆಯುವ ಸತ್ಯದರ್ಶನ ಸಭೆಗೆ ಪಾಲ್ಗೊಳ್ಳಲು ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಬ್ಯಾರಿಕೇಡ್​ ನಿರ್ಮಿಸಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಬಸವೇಶ್ವರ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ನಂತರ ಭಕ್ತರೊಂದಿಗೆ ಶಾಂತಿಯುತ ಮೆರವಣಿಗೆಯಲ್ಲಿ ಮಠದ ಆವರಣ ಪ್ರವೇಶ ಮಾಡಲಿದ್ದಾರೆ.

ಸಭೆಗೆ ಒಪ್ಪಿಗೆ ನೀಡದ ಮೂಜಗು: ಮಠದ ಆವರಣದಲ್ಲಿ ಸಭೆ ನಡೆಸಲು ಮೂರುಸಾವಿರ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ (ಮೂಜಗು) ಒಪ್ಪಿಗೆ ನೀಡಿಲ್ಲ.

ಶಿವರಾತ್ರಿ ಅಮವಾಸ್ಯೆಯ ನಿಮಿತ್ತ ಭಕ್ತರು ಕರ್ತೃ ಗದ್ದುಗೆ ದರ್ಶನ ಮಾಡಲು ಆಗಮಿಸುತ್ತಿದ್ದು, ಅವರಿಗೆ ಪ್ರತ್ಯೇಕ ಬ್ಯಾರಿಕೇಡ್​ ನಿರ್ಮಿಸಿ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರಿಗೆ ಮಠದ ಆವರಣಕ್ಕೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತಿದೆ. ಮಠದ ಒಳಭಾಗಕ್ಕೆ ಪೊಲೀಸರು ಭಕ್ತರನ್ನು ಬಿಡುತ್ತಿಲ್ಲ. (ದಿಗ್ವಿಜಯ ನ್ಯೂಸ್​)