ಜಿಲ್ಲೆ

ಮನೆ ಮೇಲೆ ಪೊಲೀಸ್ ದಾಳಿ - ವಿಭಿನ್ನ ಧರ್ಮದ ಇಬ್ಬರು ಮಹಿಳೆಯರು ವಾಸವಾಗಿದ್ದ ಹಿನ್ನೆಲೆಯಲ್ಲಿ ಅನುಮಾನ

Mangaluru - Nishantha Narayana

ಪುತ್ತೂರು: ಬನ್ನೂರು ಕರ್ಮಲದ ಪೊಲೀಸ್ ವಸತಿ ನಿಲಯದ ಸಮೀಪದ ಬಾಡಿಗೆ ಮನೆಯೊಂದರ ಮೇಲೆ ನಗರ ಪೊಲೀಸ್ ಠಾಣೆಯವರು ಗುರುವಾರ ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ದಾಳಿಗೊಳಗಾದ ಮನೆಯಲ್ಲಿ ಕೆಲವು ದಿನಗಳಿಂದ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ದಾಳಿ ನಡೆಸಿದ್ದಾರೆ. ಮನೆಯಲ್ಲಿ ಮನೆಯ ಯಜಮಾನಿ ಹಾಗೂ ಇನ್ನೊಬ್ಬ ಮಹಿಳೆ ಇದ್ದಿರುವುದು ಬಿಟ್ಟರೆ ಬೇರಾರೂ ಇರಲಿಲ್ಲ ಎನ್ನಲಾಗಿದೆ.


ವಿಚಾರಣೆ ವೇಳೆ ಇನ್ನೋರ್ವ ಮಹಿಳೆ ಮನೆಯೊಡತಿಯ ಗೆಳತಿ ಎಂದು ಹೇಳಿದ್ದಾಳೆನ್ನಲಾಗಿದೆ. ಇಬ್ಬರು ಮಹಿಳೆಯರು ಬೇರೆ ಬೇರೆ ಧರ್ಮದವರಾಗಿದ್ದು, ಕೆಲವು ದಿನಗಳಿಂದ ಒಂದೇ ಮನೆಯಲ್ಲಿ ಇರುವುದರಿಂದ ಅನುಮಾನಗೊಂಡು ದೂರು ನೀಡಿದ್ದಾರೆನ್ನಲಾಗಿದೆ. ಇಬ್ಬರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.