ಜಿಲ್ಲೆ

ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಸುಳ್ಳ ರಸ್ತೆಯ ಇಂದ್ರಪ್ರಸ್ಥ ಲೇಔಟ್‌ನಲ್ಲಿ 2018ರಲ್ಲಿ ನಡೆದಿದ್ದ ಕೊಲೆ ಪ್ರಕರಣ ಭೇದಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದೇವಾಂಗಪೇಟೆ ನಿವಾಸಿ ಗೌಸ್ ಮೊಹ್ಮದ್ ನದಾಫ್ (40) ಬಂಧಿತ ವ್ಯಕ್ತಿ. ಸೋನಿಯಾಗಾಂಧಿ ನಗರದ ನಿವಾಸಿ ಕುಮಾರ ಬೆಟಗೇರಿ (57) ಕೊಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಎಸಿಪಿ ಶಿವಪ್ರಕಾಶ ನಾಯಕ್, ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಎಸ್. ಹಟ್ಟಿ ನೇತೃತ್ವದ ತಂಡ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಬಂಧಿತರನಿಂದ ದ್ವಿಚಕ್ರ ವಾಹನ, ಸುಲಿಗೆ ಮಾಡಿದ್ದ ನಗದು ಜಪ್ತಿ ಮಾಡಿದೆ.

ಗೌಸ್ ಮೊಹ್ಮದ ಮತ್ತು ಕುಮಾರ ಬೆಟಗೇರಿ ಮಧ್ಯೆ ಸಾಂಗತ್ಯವಿತ್ತು. ಅಸಹಜ ಲೈಂಗಿಕ ಪ್ರಕ್ರಿಯೆ ನಡೆಸಿರುವ ಕುರಿತು ಗೌಸ್ ಮೊಹ್ಮದ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.