ಜಿಲ್ಲೆ

9 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 9 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತನೊಬ್ಬ ವಿದ್ಯಾಗಿರಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಳ್ಳೇಹುಬ್ಬಳ್ಳಿ ಮೂಲದ ಸದ್ಯ ತಾಲೂಕಿನ ತಿಮ್ಮಾಪುರ ಗ್ರಾಮದ ನಿವಾಸಿ ಹುಸೇನಸಾಬ ಇಮಾಮಸಾಬ ಕನವಳ್ಳಿ ಬಂಽತ ಆರೋಪಿ.

ಮೂವರು ಆರೋಪಿಗಳು ಜು. 24ರಂದು ಕಲಘಟಗಿ ರಸ್ತೆಯ ಗಿರಿನಗರ ಹತ್ತಿರ ಸಿದ್ದರಾಮಯ್ಯ ಹಿರೇಮಠ ಎಂಬುವರ ಬೈಕ್ ಕಸಿಯಲು ಯತ್ನಿಸಿದ್ದರು. ಈ ಕುರಿತು ಸಿದ್ದರಾಮಯ್ಯ ಅವರು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ವಿಶೇಷ ತಂಡ, ಹುಸೇನಸಾಬ ಕನವಳ್ಳಿ ಎಂಬಾತನನ್ನು ಬಂಽಸಿದೆ. ಆತನನ್ನು ವಿಚಾರಣೆಗೊಳಪಡಿಸಿದಾಗ 9 ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿವೆ. ಬಂಽತನಿAದ ಚಿನ್ನ, ಬೆಳ್ಳಿಯ ಆಭರಣಗಳು, ನಗದು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ.