ಮಡಿಕೇರಿ:
ಕರ್ನಾಟಕ - ಕೇರಳ ಪೊಲೀಸ್ ಅಂತಾರಾಜ್ಯ ಗಡಿ ಸಮನ್ವಯತಾ ಸಭೆ ವಿರಾಜಪೇಟೆಯಲ್ಲಿ ಬುಧವಾರ ನಡೆಯಿತು. ದಕ್ಷಿಣ ವಲಯ ಡಿಐಜಿಪಿ ಅಮಿತ್‌ಸಿಂಗ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕೇರಳದ ಕಣ್ಣೂರು ಡಿಐಜಿಪಿ, ನಕ್ಸಲ್ ನಿಗ್ರಹ ಪಡೆ ಡಿಐಜಪಿ, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳ ಎಸ್‌ಪಿಗಳು, ಕೇರಳ ಎಸ್‌ಒಜಿ ಪೊಲೀಸ್ ವರಿಷ್ಠಾಧಿಕಾರಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಎಸ್‌ಪಿಗಳು, ಕಾರ್ಕಳ ಎಎನ್‌ಎಫ್, ಐಎಸ್‌ಡಿ ವಿಭಾಗದ ಪ್ರಮುಖರು, ಮಂಗಳೂರು ನಗರದ ಅಪರಾಧ ಮತ್ತು ಸಂಚಾರಿ ಡಿಸಿಪಿಗಳು, ಇರಿಟ್ಟಿಯ ಎಸಿಪಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಗಳನ್ನು ಈ ಸಂದರ್ಭ ವಿನಿಮಯ ಮಾಡಿಕೊಳ್ಳಲಾಯಿತು.