ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ನೇಮಕಾತಿ ವಿಚಾರದಲ್ಲಿ ಈಗಾಗಲೇ ನಡೆದಿರುವ ಹಗರಣದ ನಡುವೆಯೇ ಹೊಸ ನೇಮಕಾತಿಯ ಅಧಿಸೂಚನೆ ಹೊರಬಿದ್ದಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1,137 ಸಿವಿಲ್ ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆ ಹೊರಡಿಸಿರುವ 1,137 ಹುದ್ದೆಗಳ ಪೈಕಿ ಪುರುಷರಿಗೆ 683, ಮಹಿಳೆಯರಿಗೆ 229 ಮೀಸಲಾತಿ ಜತೆಗೆ ಸೇವಾನಿರತ ಮತ್ತು ತೃತೀಯ ಲಿಂಗಿಗಳಿಗೂ ಮೀಸಲಾತಿ ನೀಡಲಾಗಿದೆ.
ಇದೇ ಅಕ್ಟೋಬರ್ 20ರಿಂದ ನ.21ರ ಸಂಜೆ 6 ಗಂಟೆಯವರೆಗೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಶುಲ್ಕ ಪಾವತಿ ಮಾಡಲು ನ.23 ಕೊನೆಯ ದಿನಾಂಕವಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.