ಲೋಕಾಯುಕ್ತ ಬಲೆಗೆ ಪೊಲೀಸ್ ಪೇದೆ 
ಜಿಲ್ಲೆ

ಗೃಹ ಸಚಿವರ ತವರಲ್ಲೇ ಲಂಚಕ್ಕೆ ಕೈಒಡ್ಡಿದ ಪೊಲೀಸ್​ ಪೇದೆ ಲೋಕಾ ಬಲೆಗೆ

ಚಿಂಚೋಳಿ (ಕಲಬುರಗಿ): ಗೃಹ ಸಚಿವ ಪ್ರಿಯಾಂಕ್​ ಖರ್ಗೆ ತವರು ಜಿಲ್ಲೆಯಲ್ಲಿ ಪೊಲೀಸರು ಭ್ರಷ್ಟಾಚಾರ, ಡೀಲ್​ನಲ್ಲಿ ತೊಡಗಿರುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಆಳಂದ ತಾಲೂಕಿನಲ್ಲಿ ಅಕ್ಕಿ ಕಳ್ಳರ ಜತೆ ಕೈ ಜೋಡಿಸಿರುವ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಪೊಲೀಸ್​ ಪೇದೆ ಲಂಚಕ್ಕೆ ಕೈ ಒಡ್ಡಿ, ಸಾಕ್ಷಿ ಸಮೇತ ಲೋಕಾಯುಕ್ತ ಪೊಲೀಸ್​ ಬಲೆಗೆ ಬಿದ್ದ ಟನೆ ನಡೆದಿದೆ.

ಜಾಮೀನಿನ ಮೇಲೆ ಇರುವ ವ್ಯಕ್ತಿ ಬಳಿ ಮೂರು ಸಾವಿರ ರೂ. ಫೋನ್​ ಪೇ ಮೂಲಕ ಲಂಚ ಪಡೆದ ಪೊಲೀಸ್​ ಪೇದೆಯೂ ಸಾಕ್ಷಿ ಸಹಿತ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸುಲೇಪೇಟ್​ ಪೊಲೀಸ್​ ಠಾಣೆಯಲ್ಲಿ ನಡೆದಿದೆ. ಸುಲೇಪೇಟ್​ ಠಾಣೆಯ ಪೊಲೀಸ್​ ಪೇದೆ ಅನೀಲ ಲೋಕಾಯುಕ್ತ ಬಲೆಗೆ ಬಿದ್ದವ.

ತಾಲೂಕಿನ ಗಡಿಕೇಶ್ವಾರ ಗ್ರಾಮದ ಚಂದ್ರಕಾಂತ ರಂಗನೂರಗೆ ಜಾಮೀನು ನೀಡಿ, ಪ್ರತಿ ತಿಂಗಳು ಸುಲೇಪೇಟ್​ ಠಾಣೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಸುಲೇಪೇಟ್​ ಪೊಲೀಸ್​ ಠಾಣೆ ರೈಟರ್​ ಅನೀಲ ಹಾಜರಾತಿ ನಮೂದಿಸಲು ಪ್ರತಿ ಭಾನುವಾರ ಠಾಣೆಗೆ ಹಾಜರಾಗುವಂತೆ ಸತಾಯಿಸುತ್ತಿದ್ದ. ಇಲ್ಲದಿದ್ದರೆ ನಿನ್ನ ಜಾಮೀನು ರದ್ದು ಮಾಡಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಹೆದರಿಸಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದ. ವಾರಕ್ಕೊಮ್ಮೆ ಬರುವುದು ತಪ್ಪಿಸಿಕೊಳ್ಳಲು ಚಂದ್ರಕಾಂತನೂ ಮಧ್ಯವರ್ತಿ ಕೃಷ್ಣ ಅವರ ಮೊಬೈಲ್​ಗೆ ಮೂರು ಸಾವಿರ ರೂ. ಫೋನ್​ ಪೇ ಮೂಲಕ ವರ್ಗಾವಣೆ ಮಾಡಿಕೊಂಡಿದ್ದು, ಸಾ ದೂರಿನಂತೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅನೀಲನನ್ನು ಬಂಧಿಸಿದ್ದಾರೆ. ತನಿಖಾಧಿಕಾರಿ ರವಿಕುಮಾರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.