ಜಿಲ್ಲೆ

ನಾಲ್ಕು ತಿಂಗಳ ಮಗನನ್ನು ಹತ್ಯೆಗೈದ ಪೊಲೀಸ್ ಪೇದೆ ಬಂಧನ ; ಜಾತ್ರೆಗೆ ಕರೆದೊಯ್ಯದಂತೆ ಪತ್ನಿ ತಡೆದಿದ್ದಕ್ಕೆ ಕೃತ್ಯ!

ಬೆಳಗಾವಿ : ಜಾತ್ರೆಗೆ ಮಗುವನ್ನು ಕರೆದೊಯ್ಯದಂತೆ ಪತ್ನಿ ತಡೆದಿದ್ದರಿಂದ ಮಗನನ್ನೇ ರಸ್ತೆಗೆ ಎಸೆದು ಕೊಲೆಗೈದ ಆರೋಪಿತ ಪೊಲೀಸ್ ಪೇದೆಯನ್ನು ಕುಡಚಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.‌

ಗೋಕಾಕ ತಾಲ್ಲೂಕಿನ ದುರದುಂಡಿ ಗ್ರಾಮದ ಬಸಪ್ಪ ಬಾಳುಂಕಿ ಬಂಧಿತ ಆರೋಪಿ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್)ಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ  ಬಸಪ್ಪ ಸೆ.18 ರಂದು ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ

ರಾತ್ರಿ ಬೈಕ್‌ ಮೇಲೆ ಜಾತ್ರೆಗೆ 4 ತಿಂಗಳ ಮಗು ಸಂಚಿತನನ್ನು ಕರೆದೊಯ್ಯದಂತೆ ಪತ್ನಿ ಲಕ್ಷ್ಮಿ ತಡೆದ ಕಾರಣ ಸಿಟ್ಟಿಗೆದ್ದು ಮಗುವನ್ನು ರಸ್ತೆಗೆ ಎಸೆದಿದ್ದರಿಂದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಬಸಪ್ಪ ಆಗಾಗ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಆತನ ಲಕ್ಷ್ಮಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ