ಜಿಲ್ಲೆ

ಪೊಲೀಸ್ ಕಾನ್​ಸ್ಟೆಬಲ್​ ಮತ್ತು ಪತ್ನಿ ಇಬ್ಬರಿಂದಲೂ ಆತ್ಮಹತ್ಯೆ ಯತ್ನ; ಸಾವಿಗೀಡಾದ ಹೆಂಡತಿ, ಪೇದೆ ಪರಿಸ್ಥಿತಿ ಚಿಂತಾಜನಕ

ಚಿಕ್ಕಬಳ್ಳಾಪುರ: ಪೊಲೀಸ್ ಕಾನ್​​ಸ್ಟೆಬಲ್​ವೊಬ್ಬರು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಹೆಂಡತಿ ಸಾವಿಗೀಡಾದರೆ, ಗಂಡ ಚಿಂತಾಜನಕ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರದ ಅಣಕನೂರು ಗ್ರಾಮದಲ್ಲಿ ಪೊಲೀಸ್​ ಕಾನ್​ಸ್ಟೆಬಲ್ ಸುರೇಂದ್ರ ಹಾಗೂ ಅವರ ಪತ್ನಿ ಸ್ನೇಹ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಪತ್ನಿ ಸಾವಿಗೀಡಾಗಿದ್ದು, ಪತಿ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಸುರೇಂದ್ರ ಕಾನ್​ಸ್ಟೆಬಲ್​ ಆಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ ಎನ್ನಲಾಗುತ್ತಿದ್ದರೂ ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯಿಂದ ಹೊರಬೀಳಬೇಕಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.