HANUMANTAPPA 
ಜಿಲ್ಲೆ

ಪೊಲೀಸ್ ಆಯುಕ್ತರ ಅಮಾನತ್ತು ಖಂಡನೀಯ

 ರಾಯಚೂರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಢಾಂಗಣದಲ್ಲಿ ನಡೆದ ಆರ್‌ಸಿಬಿ ತಂಡ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾಲ್ತುಳಿತ ಘಟನೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ದಯಾನಂದ ಇವರನ್ನು ಅಮಾನತ್‌ಗೊಳಿಸಿರುವದನ್ನು ರದ್ದುಗೊಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಹಿತ ರಕ್ಷಣಾ ಸಂಘ ರಾಜ್ಯಾಧ್ಯಕ್ಷ ವೈ.ಹನುಮಂತಪ್ಪ ನಾಯಕ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಗೆ ಸರ್ಕಾರವೇ ನೇರ ಕಾರಣವಾಗಿದೆ. ಪೊಲೀಸರು ಕಾರ್ಯಕ್ರಮ ನಡೆಸುವದುಬೇಡ ಎಂದರೂ ಕಾರ್ಯಕ್ರಮ ನಡೆಸಿ ಲಕ್ಷಾಂತರ ಜನರ ನಿಯಂತ್ರಿಸಲಾಗದ ದುರ್ಘಟನೆ ಸಂಭವಿಸಿದೆ. ಆದರೆ ಕಾರ್ಯಕ್ರಮ ನಡೆಸಲು ಪೊಲೀಸರ ಮೇಲೆ ಒತ್ತಡ ಹಾಕಿ ಘಟನೆಗೆ ಪೊಲೀಸರ ತಲೆಗೆ ಕಟ್ಟುವ ಕೆಲಸ ಸರ್ಕಾರ ಮಾಡುತ್ತಿದೆ. 30 ಸಾವಿರ ಆಸನದ ವ್ಯವಸ್ಥೆ ಇರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಸಿರುವದೇ ಸರ್ಕಾರ ತಪ್ಪು ನಡೆಯಾಗಿದೆ.

ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿ ದುರ್ಘಟನೆ ನಡೆದಿದೆ. ಆದರೆ ಸರ್ಕಾರ ತನ್ನ ವೈಫಲ್ಯ ಮುಚ್ಚಲು ನಗರ ಆಯುಕ್ತ ಸೇರಿ ಪೊಲೀಸರನ್ನು ಅಮಾನತ್‌ಗೊಳಿಸಿರುವದು ಖಂಡನೀಯವಾಗಿದೆ. ಕೂಡಲೇ ಅಮಾನತ್ ಆದೇಶ ರದ್ದುಗೊಳಿಸಬೇಕು. ಇಲ್ಲದೇ ಹೋದಲಿ ರಾಜ್ಯದಾಧ್ಯಂತ ಹೋರಾಟ ನಡೆಸುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪಿ.ಸೂರ್ಯ ನಾರಾಯಣ ಅಸ್ಕಿಹಾಳ, ರಂಗಪ್ಪ ನಾಯಕ ನಗರಗುಂಡ, ಹುಸೇನಪ್ಪ ಹೀರೆಕೂಡ್ಲಿಗಿ ಇದ್ದರು.