ಮಂಗಳೂರು : ನಗರದ ಪಾಂಡೇಶ್ವರ ರೊಸಾರಿಯೊ ಮೈದಾನದಲ್ಲಿ ಭಾನುವಾರ ಸಂಜೆ ಸ್ಥಳೀಯರು ಆಯೋಜಿಸಿದ್ದ ಅಕ್ವಾ ಫೆಸ್ಟ್‌ನಲ್ಲಿ ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ಭಾಗವಹಿಸಿ ಒಂದೇ ಏಟಿಗೆ ಮಡಕೆಯನ್ನು ಕೋಲಿನಿಂದ ಒಡೆಯುವ ಮೂಲಕ ಸೇರಿದ್ದ ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದರು.
ನಾಡಿನ ಸಂತಸ, ಸಂಭ್ರಮದ ಹಬ್ಬಗಳಲ್ಲಿ ಒಂದಾಗಿರುವ ಕೃಷ್ಣ ಜನ್ಮಾಷ್ಟಮಿಯನ್ನು ಮೊಸರು ಕುಡಿಕೆ ಉತ್ಸವದೊಂದಿಗೆ ಆಚರಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಎತ್ತರದಲ್ಲಿ ನೀರಿರುವ ಮಡೆಕಗಳನ್ನು ಜೋತುಹಾಕಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ಮಡಕೆ ಒಡೆಯುವ ಸ್ಪರ್ಧೆ, ಆಟವನ್ನೂ ಆಡಲಾಗುತ್ತದೆ. ರೊಸಾರಿಯೋ ಮೈದಾನದಲ್ಲಿ ಸುಮಾರು 100ಕ್ಕೂ ಅಧಿಕ ಸ್ಥಳೀಯರು ಸೇರಿಕೊಂಡು ಈ ಅಕ್ವಾ ಫೆಸ್ಟ್ ಎಂಬ ಮಡಕೆ ಒಡೆಯುವ ಕಾರ್ಯಕ್ರಮ ಆಯೋಜಿಸಿದ್ದರು. ಸಂಜೆ ಹೊತ್ತು ಅದೇ ದಾರಿಯಲ್ಲಿ ವಾಕಿಂಗ್‌ಗೆ ತೆರಳಿದ್ದ ಪೊಲೀಸ್ ಕಮಿಷನರ್ ಶಶಿ ಕುಮಾರ್ ಆಟವನ್ನು ವೀಕ್ಷಿಸುತ್ತಿದ್ದಾಗ ಸ್ಥಳೀಯರು ಅವರನ್ನು ಮಡಕೆ ಒಡೆಯಲು ಆಹ್ವಾನಿಸಿದ್ದರು.