ಜಿಲ್ಲೆ

ತರಕಾರಿ ವಾಹನದಲ್ಲಿ 8 ಕ್ವಿಂಟಾಲ್‌ ದನದ ಮಾಂಸ!

ಸುಭಾಸ ಹೆಗಡೆ ಧೂಪದಹೊಂಡ

ಕುಮಟಾ: ಮೀನಿನ ಲಾರಿಯಲ್ಲಿ ದನದ ಮಾಂಸ ಸಾಗಣೆ ಕಳೆದ ವಾರವಷ್ಟೇ ಬಯಲಾಗಿತ್ತು. ಈಗ ತರಕಾರಿವಾಹನದಲ್ಲಿ ಸಾಗಿಸುತ್ತಿದ್ದ ದನದ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.

ತಾಲೂಕಿನ ಹೊಳೆಗದ್ದೆ ಟೋಲ್ ನಾಕಾ ಬಳಿ ಶುಕ್ರವಾರ ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬೆಳಗಾವಿಯ ಖಾನಾಪುರದ ಅಯೂಬ್ ಅಹಮ್ಮದ್ ಅಬ್ದುಲ್ ಸತ್ತಾರ, ಮೆಹಬೂಬ್ ಉಸ್ಮಾನ್ ಮುಲ್ಲಾ, ನಾಜಮೀನ್ ಅಸ್ಲಾಂ ಪಠಾಣ ಬಂಧಿತ ಆರೋಪಿಗಳಾಗಿದ್ದು ಅಲ್ಲಾವುದ್ದೀನ್ ಬೇಪಾರಿ ಎಂಬಾತ ಪರಾರಿಯಾಗಿದ್ದಾನೆ.


ಬೆಳಗಿನ ಜಾವ 3 ಗಂಟೆ ಸುಮಾರಿಗೆ ಟೋಲ್ ನಾಕಾದಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿರುವಾಗ ಬೊಲೆರೋ ವಾಹನದಲ್ಲಿ ತರಕಾರಿ ರಾಶಿಯ ಕೆಳಗಡೆ ಸುಮಾರು 8 ಕ್ವಿಂಟಾಲ್‌ ದನದ ಮಾಂಸವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.