ಜಿಲ್ಲೆ

ಎಣ್ಣಿ ಗುಂಗಲಿ ಪೊಲೀಸರಿಗೆ ಅವಾಜ್ ಹಾಕಿದ ಭೂಪರು; ಮೂವರ ವಿರುದ್ಧ ಎಫ್‌ಐಆರ್

Haveri - Kariyappa Aralikatti

ರಾಣೆಬೆನ್ನೂರ: ಬಾರ್ ಬಂದ್ ಮಾಡಿಸುವ ವಿಚಾರದಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಮೂವರು ಮದ್ಯ ಎಸನಿಗಳು ಬಾರ್ ಬಂದ್ ಮಾಡಿಸಿದರೆ ಬಟ್ಟೆ ಬಿಚ್ಚಿ ಹೊಡೆಯುತ್ತೇವೆ ಎಂದು ಅವಾಜ್ ಹಾಕಿ ಪರಾರಿಯಾದ ಘಟನೆ ಕುರಿತು ತಾಲೂಕಿನ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ದೂರು ದಾಖಲಾಗಿದೆ.
ತಾಲೂಕಿನ ನಲವಾಗಿಲ ಗ್ರಾಮದ ಮಂಜುನಾಥ ಶಿವಪ್ಪ ಅಸುಂಡಿ, ಪರಶುರಾಮ ಹನುಮಂತಪ್ಪ ಯರಗುಂಟಿ, ಅನಂತ ಮಂಜಪ್ಪ ಗಂಗನರಸಿ ಪೊಲೀಸರಿಗೆ ಅವಾಜ್ ಹಾಕಿದ ಆರೋಪಿತರು.
ಕುಮಾರಪಟ್ಟಣ ಠಾಣೆಯ ಕಾನ್ಸಟೇಬಲ್ ಮಂಜುನಾಥರಡ್ಡಿ ಕೊಪ್ಪದ ಎಂಬುವರು ದೂರು ದಾಖಲಿಸಿದ್ದಾರೆ. ಇವರು ರಾತ್ರಿ ಸಮಯದಲ್ಲಿ ಕೋಡಿಯಾಲ ಹೊಸಪೇಟೆ ಬಳಿಯ ಅಜಯ್ ಬಾರ್ ಬಂದ್ ಮಾಡಿಸಲು ಹೋದ ಸಮಯದಲ್ಲಿ ಬಾರ್ ಎದುರಿನ ಕಟ್ಟೆಯ ಮೇಲೆ ಮದ್ಯ ಸೇವಿಸುತ್ತಿದ್ದ ಕುಳಿತ್ತಿದ್ದ ಮೂವರು ನಮಗೆ ಬಾರ್ ಬಂದ್ ಮಾಡಿಸೋದು ಗೊತ್ತಿದೆ ನೀವು ಹೋಗಿ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ.
ಸಮಯ ಆಗಿದ್ದರಿಂದ ಬಾರ್ ಬಂದ್ ಮಾಡಬೇಕು ಎಂದು ಕಾನ್ಸಟೇಬಲ್ ಹೇಳಿದ್ದಕ್ಕೆ ವಿರೋಧಿಸಿದ ಮೂವರು ಆರೋಪಿತರು ನಾವು ಲೋಕಲ್ ನಲವಾಗಿಲ ಗ್ರಾಮದವರು ಬಾರ್ ಬಂದ್ ಮಾಡಿಸಿ ಹ್ಯಾಂಗ್ ಡ್ಯೂಟಿ ಮಾಡ್ತಿಯೋ ನೋಡುತ್ತೇವೆ. ನಾವು ಇನ್ನೂ ಸರಾಯಿ ಕುಡಿಯಬೇಕು. ನೀನ ಯಾರನ್ನು ಕರೆದುಕೊಂಡು ಬರುತ್ತಿಯೋ ಬಾ ನೋಡಿಕೊಳ್ಳುತ್ತೇವೆ. ಬಟ್ಟೆ ಬಿಚ್ಚಿ ಹೋಡೆಯುತ್ತೇವೆ ಎಂದು ಅವಾಜ್ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಕುರಿತು ಕಾನ್ಸಟೇಬಲ್ ಆರೋಪಿಗಳ ವಿರುದ್ಧ ಸರ್ಕಾರಿ ನೌಕರಿಗೆ ಅಡ್ಡಿ ಸೇರಿ ಕಲಂ 332, 353, 114, 504, 506 ನಡಿ ಪ್ರಕರಣ ದಾಖಲಿಸಿದ್ದಾರೆ.