ಜಿಲ್ಲೆ

ಅಪರೂಪದ ಪಕ್ಷಿಗಳನ್ನು ಪಂಜರದೊಳಗಿಟ್ಟವರೀಗ ಕಂಬಿಗಳ ಹಿಂದೆ...

ಬೆಂಗಳೂರು: ಅಪರೂಪದ ಪಕ್ಷಿಗಳನ್ನು ಪಂಜರದೊಳಗಿಟ್ಟವರೇ ಈಗ ತಾವು ಕಂಬಿಗಳ ಹಿಂದೆ ಬಂಧಿ ಆಗುವಂತಾಗಿದೆ. ಅಳಿವಿನಂಚಿನಲ್ಲಿರುವ ಮ್ಯೂನಿಯಾ ಪಕ್ಷಿಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪವನ್ (27) ಹಾಗೂ ಪ್ರಕಾಶ್ (22) ಬಂಧಿತ ಆರೋಪಿಗಳು. ಇವರನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಇವರು 36 ಮ್ಯೂನಿಯಾ ಪಕ್ಷಿಗಳನ್ನು ಪಂಜರದಲ್ಲಿಟ್ಟು ಮಾರಾಟಕ್ಕೆ ಯತ್ನಿಸುತ್ತಿದ್ದರು.

ಹೀಗೆ ಭುವನೇಶ್ವರಿ ನಗರ ಬಸ್​ ನಿಲ್ದಾಣ ಬಳಿ ಇವರು ಮಾರಾಟದಲ್ಲಿ ತೊಡಗಿದ್ದಾಗ ದಾಳಿ ನಡೆಸಿದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಇವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.