ಜಿಲ್ಲೆ

ಪ್ರಿಯಾಂಕ್​ ಖರ್ಗೆಗೆ ಬೆದರಿಕೆ: ಆರೋಪಿ ಬಂಧನ

ರಮೇಶ ಮೇಳಕುಂದಾ

ಕಲಬುರಗಿ: ಸಚಿವ ಪ್ರಿಯಾಂಕ್​ ಖರ್ಗೆಗೆ ಬೆದರಿಕೆ ಕರೆ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮಹಾರಾಷ್ಟ್ರ ಲಾತೂರಿನಲ್ಲಿ ಸೊಲ್ಲಾಪುರ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಸೊಲ್ಲಾಪುರದಿಂದ ಲಾತೂರಿಗೆ ಪರಾರಿಯಾಗಿದ್ದ ದಾನೇಶ ನರೋಣಿಯನ್ನು ಬಂಧಿಸಲಾಗಿದೆ. ಬೆಂಗಳೂರು ಸದಾಶಿವ ನಗರ ಪೊಲೀಸ್​ ಠಾಣೆಗೆ ಆರೋಪಿಯನ್ನು ಕರೆದೊಯ್ದಿದ್ದಾರೆ. ಬೆಂಗಳೂರು ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಆರೋಪಿಯ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ಪೊಲೀಸರು ಬಂಧಿಸಿ, ಬೆಂಗಳೂರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗೂಗಲ್​ನಲ್ಲಿ ಸಚಿವರ ನಂಬರ್​ ತೆಗೆದುಕೊಂಡು ಕರೆ ಮಾಡಿದ್ದ ದಾನಪ್ಪ. ಪೋನ್​ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.