ಬೆಂಗಳೂರು: ಪತ್ನಿಯ ಜತೆ ಸಲಿಗೆಯಿಂದಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕಾಟನ್ಪೇಟೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ.
ಶ್ರೀನಿವಾಸ ಅಲಿಯಾಸ್ ಸೀನ ಎಂಬಾತ ಕೊಲೆಯಾದ ವ್ಯಕ್ತಿ. ಕಾಟನ್ಪೇಟೆಯ ಭಕ್ಷಿಗಾರ್ಡನ್ನಲ್ಲಿ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ಸಂತೋಷ್ ಎಂಬಾತನನ್ನು ಕಾಟನ್ಪೇಟೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀನಿವಾಸ್ ಸಂತೋಷನ ಪತ್ನಿಯ ಜೊತೆ ಸಲಿಗೆಯಿಂದ ಇರುತ್ತಿದ್ದುದರಿಂದ ಆತ ಅಕ್ರಮ ಸಂಬಂಧ ಹೊಂದಿರಬಹುದು ಎಂದುಕೊಂಡ ಸಂತೋಷ್, ಅದೇ ಸಿಟ್ಟಿನಿಂದ ಆತನನ್ನು ಕಲ್ಲಿನಿಂದ ಜ್ಜಿ ಕೊಲೆ ಮಾಡಿದ್ದಾನೆ. ಕಾಟನ್ಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.