ಶನಿವಾರಸಂತೆ: ಕಿರು ಬಿಳಹ ಗ್ರಾಮದಲ್ಲಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ತೋಟವೊಂದರಲ್ಲಿ ಬುಧವಾರ ಯುವಕ ಅತ್ಯಾಚಾರ ಯತ್ನಿಸಿದ್ದು, ವಿದ್ಯಾರ್ಥಿನಿ ಕೂಗಿಕೊಂಡಾಗ ಸ್ಥಳೀಯರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಿರು ಬಿಳಹ ಗ್ರಾಮದ ಲೋಕೇಶ್ ಅಲಿಯಾಸ್ ಪುಟ್ಟ ಆರೋಪಿ. ಶನಿವಾರಸಂತೆಯ ಶಾಲೆಯೊಂದರ ವಿದ್ಯಾರ್ಥಿನಿ ಬುಧವಾರ ಸಂಜೆ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ತೋಟವೊಂದರಲ್ಲಿ ಹೊಂಚು ಹಾಕಿದ ಆರೋಪಿ ಲೋಕೇಶ್, ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಕೂಗಿಕೊಂಡಾಗ ಸ್ಥಳೀಯರು ಸ್ಥಳಕ್ಕೆ ಬಂದು ರಕ್ಷಿಸಿ, ಆರೋಪಿಯನ್ನು ಹಿಡಿದು ಶನಿವಾರಸಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮಕೈಗೊಂಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.