ಜಿಲ್ಲೆ

ಬೈಕ್ ಕಳ್ಳತನ ಮಾಡಿದ್ದ ಅಪ್ರಾಪ್ತನನ್ನು ಬಂಧಿಸಿದ ಪೊಲೀಸರು

Gadag - Desk - Tippanna Avadoot

ಮುಂಡಗೋಡ: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಬಡಾವಣೆಯೊಂದರ ಅಪ್ರಾಪ್ತ ಬಾಲಕನೊಬ್ಬ ಅಂಬೇಡ್ಕರ್ ಓಣಿಯ ತುಕಾರಾಮ ಭೀಮಣ್ಣ ಕೊರವರ ಎಂಬುವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕೆಎ-31, ಎಕ್ಸ್ 7004 ಬೈಕ್ ಅನ್ನು ಮೇ 14ರಂದು ರಾತ್ರಿ ಕಳ್ಳತನ ಮಾಡಿದ್ದ ಈ ಕುರಿತು ಪೊಲೀಸ್ ದೂರು ಸಲ್ಲಿಸಿದ್ದರು. ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬೈಕ್ ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕನನ್ನು ಬೈಕ್ ಸಮೇತ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕ ರಾತ್ರಿ ವೇಳೆ ಬೈಕ್್ ಕಳ್ಳತನ ಮಾಡಿಕೊಂಡು ಹೋಗಿರುವುದು ಪಟ್ಟಣದ ನಿವಾಸಿಗಳಿಗೆ ಆಶ್ಚರ್ಯವುಂಟು ಮಾಡಿದೆ.