ಪೊಲೀಸರ ವರ್ತನೆ ಖಂಡಿಸಿ ಗೋಕಾಕ ನಗರ1ಸಭೆ ಎದುರು ಧರಣಿ ನಡೆಸಿದ ಬೀದಿಬದಿ ವ್ಯಾಪಾರಸ್ಥರೊಂದಿಗೆ ಪೌರಾಯುಕ್ತ ಶಿವಾನಂದ ಹಿರೇಮಠ ಮಾತನಾಡಿದರು. ಅಬ್ದುಲ್ ನೂರಸಾನ್, ಮುಸ್ತಾಫ್ ಅತ್ತಾರ್, ತೌಸಿಫ್ ಮುಲ್ಲಾ, ಜಯಪ್ಪ ನರಗುಂದ, ಮಾಳವ್ವ ದ್ಯಾಮಕ್ಕಗೋಳ, ನಾಗೇಶ ಕಾಂಬಳೆ, ರಮಜಾನ್ ಸನದಿ ಇತರರು ಇದ್ದರು. 
ಜಿಲ್ಲೆ

ಪೊಲೀಸರ ಕ್ರಮಕ್ಕೆ ಖಂಡನೆ

ಗೋಕಾಕ: ಲಾಠಿ ಬೀಸಿ ತರಕಾರಿ ನಾಶಪಡಿಸುತ್ತಿರುವ ಪೊಲೀಸರ ಕ್ರಮ ಖಂಡಿಸಿ ಶುಕ್ರವಾರ ಬೀದಿಬದಿ ವ್ಯಾಪಾರಸ್ಥರು ಗೋಕಾಕ ನಗರಸಭೆ ಎದುರು ಧರಣಿ ನಡೆಸಿದರು.

ನಗರದ ಅಪ್ಸರಾ ಖೂಟ ಹಾಗೂ ತರಕಾರಿ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ಜನರ ಮೇಲೆ ಪೊಲೀಸರು ಲಾಠಿ ಬೀಸಿ ತರಕಾರಿಗಳನ್ನು ರಸ್ತೆಗೆ ಸುರಿದು ಹಾಳು ಮಾಡುತ್ತಿದ್ದಾರೆ. ಈಗಾಗಲೇ ನೆರೆ ಹಾಗೂ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಈಗ ಸಾಲ ಮಾಡಿ ಮತ್ತೆ ವ್ಯಾಪಾರ ಆರಂಭಿಸಿದ್ದೇವೆ. ಆದರೆ, ಪೊಲೀಸರು ವಿನಾಕಾರಣ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ವ್ಯಾಪಾರ ಮಾಡಲು ನಗರಸಭೆಯಿಂದ ಕರ ವಸೂಲಿ ಮಾಡಲಾಗುತ್ತಿದ್ದು, ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಶಿವಾನಂದ ಹಿರೇಮಠ ಮಾತನಾಡಿ, ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಸರ್ಕಾರ ನೀಡಿದ ನಿರ್ದೇಶನಗಳನ್ನು ವ್ಯಾಪಾರಸ್ಥರು ತಪ್ಪದೇ ಪಾಲಿಸಬೇಕು. ಜನದಟ್ಟಣೆ ಹಾಗೂ ಸಂಚಾರಕ್ಕೆ ಅಡೆತಡೆ ಮಾಡುತ್ತಿರುವುದರಿಂದ ಪೊಲೀಸರು ಕ್ರಮ ಕೈಗೊಂಡಿರಬಹುದು. ಯಾವುದಕ್ಕೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ವ್ಯಾಪಾರಸ್ಥರು ಕೂಡ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು. ಬಳಿಕ ವ್ಯಾಪಾರಸ್ಥರು ಪ್ರತಿಭಟನೆ ಹಿಂಪಡೆದರು.

ಅಬ್ದುಲ್ ನೂರಸಾನ್, ಮುಸ್ತಾಫ್ ಅತ್ತಾರ್, ತೌಸಿಫ್ ಮುಲ್ಲಾ, ಜಯಪ್ಪ ನರಗುಂದ, ಮಾಳವ್ವ ದ್ಯಾಮಕ್ಕಗೋಳ, ನಾಗೇಶ ಕಾಂಬಳೆ, ರಮಜಾನ್ ಸನದಿ, ಅನ್ವರಹುಸೇನ್ ಶಿರೋಳಕರ, ಇಕ್ಬಾಲ್ ಕುರಬೇಟ, ಯಲ್ಲವ್ವ ಭಜಂತ್ರಿ, ಅಲ್ಲಪ್ಪ ಬಡಗಾಂವಿ, ರಾಜನಬಿ ಪಟೇಲ್, ಲಕ್ಷ್ಮೀ ಗದಾಡಿ, ತಾರೇಶ ಭಜಂತ್ರಿ, ಯಾಸೀನ್ ಪಟೇಲ್, ಆಸೀಫ್ ಅರಳಿಕಟ್ಟಿ, ಹಬೀಬ ಜಗದಾಳ ಹಾಗೂ ಗೋಕಾಕ ನಗರದ ಬೀದಿಬದಿ ವ್ಯಾಪಾರಸ್ಥರು ಇದ್ದರು.