ಜಿಲ್ಲೆ

ಪೊಳಲಿ ದೇವಳ ಭಕ್ತರ ಪ್ರವೇಶಕ್ಕೆ ಕಟ್ಟುನಿಟ್ಟಿನ ಕ್ರಮ

Dakshina Kannada

ಗುರುಪುರ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜು.5ರಿಂದ ಭಕ್ತರಿಗೆ ದೇವರ ದರ್ಶನ ಲಭ್ಯವಿದೆ. ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳಿಂದ ದೇವಾಲಯಕ್ಕೆ ಭಕ್ತರ ಭೇಟಿ, ಸೇವೆಗಳಿಗೆ ನಿಷೇಧ ಹೇರಲಾಗಿತ್ತು.

ಇದೀಗ ಸರ್ಕಾರದ ಮಾರ್ಗಸೂಚಿಯಂತೆ ಜು.5ರಂದು ಬೆಳಗ್ಗೆ ದೇವಾಲಯದೊಳಗೆ ಸ್ಯಾನಿಟೈಸ್ ಮಾಡಲಾಗುತ್ತದೆ. ದೇವಳದೊಳಗೆ ಭಕ್ತರ ನಿಯಂತ್ರಣಕ್ಕಾಗಿ ಒಂದೇ ದ್ವಾರದ ಮೂಲಕ ಪ್ರವೇಶಾವಕಾಶ ನೀಡಲಾಗಿ, ಭಕ್ತರ ಸರತಿ ಸಾಲಿಗಾಗಿ ಅಡ್ಡಲಾಗಿ ಸೀರೆ ಕಟ್ಟಿ, ಪ್ರತಿಯೊಬ್ಬರೂ ಅಂತರ ಕಾಪಾಡುವ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಭಕ್ತರ ಮೇಲೆ ನಿಗಾ ವಹಿಸಲು ದೇವಾಲಯದೆದುರು ಸಿಬ್ಬಂದಿ ನಿಯೋಜಿಸಲಾಗಿದ್ದು, ಭಕ್ತರ ತಪಾಸಣೆಗೈಯಲಿದ್ದಾರೆ. ಆದರೆ ಮುಂದಿನ ಆದೇಶದವರೆಗೆ ದೇವಾಲಯದಲ್ಲಿ ತೀರ್ಥ ಪ್ರಸಾಸ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂದು ದೇವಾಲಯದ ಅಧಿಕೃತ ಮೂಲ ತಿಳಿಸಿದೆ.