ಗುರುಪುರ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮುಂದಿನ ಒಂದು ತಿಂಗಳ ಪರ್ಯಂತ ನಡೆಯಲಿರುವ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ರಾತ್ರಿ ಧ್ವಜಾರೋಹಣ ನೆರವೇರಿತು.
ಶನಿವಾರದಿಂದ ಜಾತ್ರೆ ಆರಂಭವಾಗಿದ್ದು, ಈ ಬಾರಿ ಒಟ್ಟು 28 ದಿನಗಳ ಉತ್ಸವ ನಡೆಯಲಿದೆ. ಏಪ್ರಿಲ್ 5ರಂದು ಪ್ರಥಮ ಚೆಂಡು ಹಾಗೂ ಕುಮಾರ ರಥ, 6ರಂದು 2ನೇ ಚೆಂಡು ಮತ್ತು ಹೂವಿನ ತೇರು(ರಥ), 7ರಂದು 3ನೇ ಚೆಂಡು ಮತ್ತು ಸೂರ್ಯಮಂಡಲ, 8ರಂದು 4ನೇ ಚೆಂಡು ಮತ್ತು ಚಂದ್ರಮಂಡಲ, 9ರಂದು 5ನೇ ಚೆಂಡು(ಕಡೆ ಚೆಂಡು) ಮತ್ತು ಬೆಳ್ಳಿರಥ, ಆಳುಪಲ್ಲಕಿ ರಥ, 10ರಂದು ಮಹಾರಥೋತ್ಸವ, 11ರಂದು ಆರಾಡ, ಅವಭೃತ ಸ್ನಾನ, ಮೃಗಂತಾಯ ನೇಮ, 12ರಂದು ಶ್ರೀ ಕ್ಷೇತ್ರದ ಪ್ರಧಾನ ದೈವವಾಗಿರುವ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಲಿದೆ.
ಧ್ವಜಾರೋಹಣ ಸಂದರ್ಭ ದೇವಸ್ಥಾನದ ಆನುಮಂಶಿಕ ಮೊಕ್ತೇಸರರು, ಮೊಕ್ತೇಸರರು, ಪವಿತ್ರಪಾಣಿ, ಅರ್ಚಕರು, ಆಡಳಿತಾಧಿಕಾರಿ, ಸಾವಿರ ಸೀಮೆಯ ಭಕ್ತರು ಉಪಸ್ಥಿತರಿದ್ದರು.