ಚಿಕ್ಕಬಳ್ಳಾಪುರ: ಅಂತರ್ಜಲಮಟ್ಟ ಕುಸಿತದ ಸಮಸ್ಯೆಗೆ ತುತ್ತಾಗಿರುವ ಜಿಲ್ಲೆಯಲ್ಲಿ ಕಲುಷಿತ ನೀರು ಸಿಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದರ ನಿವಾರಣೆಗೆ ನಿರಂತರವಾಗಿ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ.
ಯಾವುದೇ ಶಾಶ್ವತ ನೀರಾವರಿ ಸೌಲಭ್ಯ ಹೊಂದಿರದ ಈ ಭಾಗದಲ್ಲಿ ಸಾವಿರ ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಬೇಕು. ಇದರಲ್ಲಿ ಬಹಳಷ್ಟು ಸಂದರ್ಭದಲ್ಲಿ ವೈಲ್ಯ ಕಂಡು ಬರುತ್ತಿದ್ದರೆ, ಕೆಲವು ಕಡೆ ಮಾತ್ರ ಅಲ್ಪಸ್ವಲ್ಪ ಪ್ರಮಾಣದ ನೀರು ಲಭ್ಯವಾಗುತ್ತಿದೆ. ಇದರಲ್ಲೂ ಪ್ಲೋರೈಡ್, ನೈಟ್ರೇಟ್, ಯುರೇನಿಯಂ ಸೇರಿ ಮಾರಕ ಲವಣಾಂಶ ಪತ್ತೆಯಾಗುತ್ತಿವೆ. ಇದಕ್ಕೆ ಜಿಲ್ಲಾದ್ಯಂತ ಶುದ್ಧೀಕರಣದ ಟಕ ಸ್ಥಾಪಿಸಿ, ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲದಲ್ಲೂ ಸಮಸ್ಯೆ
ಮುಂಗಾರು ಅವಧಿಯಲ್ಲೂ ಜಿಲ್ಲೆಯಲ್ಲಿ ನಿರೀೆಗೆ ಅನುಗುಣವಾಗಿ ಅಂತರ್ಜಲಮಟ್ಟ ಏರಿಕೆಯಲ್ಲಿ ಪ್ರಗತಿ ಕಂಡು ಬಂದಿಲ್ಲ. ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. 35 ಪಂಚಾಯಿತಿ ವ್ಯಾಪ್ತಿಯಲ್ಲಿನ 46 ಗ್ರಾಮಗಳಲ್ಲಿ ಸಮಸ್ಯೆ ಇದ್ದು, ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಜೆಜೆಎಂ ಯೋಜನೆಯಡಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ.
ಕ್ಷೇತ್ರವಾರು ತಪಾಸಣೆ
ಕ್ಷೇತ್ರವಾರು ಕಿಟ್ ತಪಾಸಣೆ ಪ್ರಕ್ರಿಯೆಗೆ 5975 ಮಹಿಳೆಯರಿಗೆ ತರಬೇತಿ ನೀಡಿದ್ದು ಈ ಪೈಕಿ ಸೂಕ್ಷ್ಮ ಜೀವನ ವಿಜ್ಞಾನ ಪರೀೆಯಡಿ 1251 ಮಾದರಿಗಳು, ಕ್ಷೇತ್ರದಲ್ಲಿ ಪರೀಕ್ಷಾ ಕಿಟ್ನಡಿ 1231 ಗ್ರಾಮಗಳಲ್ಲಿ 21047 ನೀರಿನ ಮಾದರಿಗಳನ್ನು ಪರೀಸಿದ್ದು 674 ಮಾದರಿಗಳು ಕಲುಷಿತಗೊಂಡಿರುವುದು ಗೊತ್ತಾಗಿದೆ.
ಕೊಳವೆಬಾವಿ ಆಸರೆ
ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಜಕ್ಕಲಮಡು ಜಲಾಶಯ, ಗುಡಿಬಂಡೆಗೆ ಅಮಾನಿ ಭೈರಸಾಗರ ಕೆರೆ, ಚಿಂತಾಮಣಿಗೆ ಕನ್ನಂಪಲ್ಲಿ ಕೆರೆ, ಬಾಗೇಪಲ್ಲಿಗೆ ಚಿತ್ರಾವತಿ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ಇವು ಬಹುತೇಕ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯ ಜನರ ದಾಹ ನೀಗಿಸಲು ಸೀಮಿತವಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಇದಕ್ಕೆ ಕೊಳವೆಬಾವಿ ಆಶ್ರಯಿಸುವುದು ಹೆಚ್ಚಿದೆ. ಇದು ಗ್ರಾಮೀಣ ಭಾಗದಲ್ಲೂ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ.
ಅನಾರೋಗ್ಯದ ಸಮಸ್ಯೆ
ರಾಜ್ಯದ ವಿವಿಧೆಡೆ ಕಲುಷಿತ ನೀರು ಸೇವಿಸಿ ಮೃತಪಟ್ಟ ಇಲ್ಲವೇ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುವ ಪ್ರಕರಣ ಹೆಚ್ಚು ವರದಿಯಾಗುತ್ತಿವೆ. ಆದರೆ, ಈ ಭಾಗದಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇಲ್ಲ. ಆದರೆ, ಸಣ್ಣಪುಟ್ಟ ಅನಾರೋಗ್ಯಕ್ಕೀಡಾಗುವುದು ಕಂಡು ಬರುತ್ತಿದೆ. ಚಿಂತಾಮಣಿ ಮತ್ತು ಶಿಡ್ಲಟ್ಟ ವ್ಯಾಪ್ತಿಯಲ್ಲಿ ಕಲುಷಿತ ನೀರಿನ ಸೇವನೆ ಸಮಸ್ಯೆ ಅರಿವಿಗೆ ಬರುತ್ತಿದ್ದಂತೆ ಸ್ಥಳಿಯ ಆಡಳಿತ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಸೇರಿ ತಪಾಸಣೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಂಡಿತ್ತು.
ಪರಿಹಾರ ಕ್ರಮಗಳು
ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಮೊದಲು ಶುದ್ಧೀಕರಣ ಪ್ರಮಾಣದ ತಪಾಸಣೆ ಪ್ರಕ್ರಿಯೆ ನಡೆಯುತ್ತಿದ್ದು ಜಿಲ್ಲೆಯಲ್ಲಿ ಪರವಾನಗಿ ಪಡೆದ ಎರಡು ಪ್ರಯೋಗಾಲಯಗಳಿದ್ದು, ಇಲ್ಲಿ ಪ್ರತಿವರ್ಷ ಕನಿಷ್ಠ 9 ಸಾವಿರ ನೀರಿನ ಮಾದರಿಗಳ ಪರೀೆಯ ಗುರಿಯನ್ನು ಹೊಂದಲಾಗಿದೆ. ಅದರಂತೆ ಅಟಲ್ ಭೂಜಲ ಯೋಜನೆಯಡಿ 885 ಮತ್ತು ಶಾಲೆಗಳಲ್ಲಿನ 312 ನೀರಿನ ಮಾದರಿಗಳನ್ನು ಪರೀಸಿದ್ದು, ಕಳೆದ ಏಪ್ರಿಲ್ನಿಂದ ಜುಲೈನವರೆಗೆ 3212 ಮಾದರಿಗಳನ್ನು ಪರೀಸಿದ್ದು, ಈ ಪೈಕಿ 333 ಮಾದರಿಗಳಲ್ಲಿ ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿ ನೀರು ಕಲುಷಿತಗೊಂಡಿರುವುದು ಗೊತ್ತಾಗಿದೆ. ಇಂತಹ ಎಲ್ಲ ಪ್ರದೇಶಗಳಲ್ಲೂ ಪರಿಹಾರ ಕ್ರಮ ಕೈಗೊಳ್ಳಲಾಗಿದೆ.
ನೀರಿನ ಸ್ಯಾಂಪಲ್ಗಳ ಪರೀಕ್ಷೆ ಸಾಧನೆ (2024ರ ಏಪ್ರಿಲ್ನಿಂದ ಜುಲೈ)
ಪ್ರಯೋಗಾಲಯ ಸ್ಯಾಂಪಲ್ ಪರೀಕ್ಷೆ ಕಲುಷಿತ
ಚಿಕ್ಕಬಳ್ಳಾಪುರ 1080 150
ಚಿಂತಾಮಣಿ 1127 114
ಗೌರಿಬಿದನೂರು 1005 69
ಒಟ್ಟು 3212 333
ಕ್ಷೇತ್ರ ಪರೀಕ್ಷಾ ಕಿಟ್ ತಪಾಸಣೆ ಸಾಧನೆ
ಗ್ರಾಮಗಳು ಪರೀಕ್ಷೆಗೊಳಪಟ್ಟ ಮಾದರಿಗಳು ಕಲುಷಿತ
1231 21047 674