ಸಾತಿಹಾಳ ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಅಂಗವಾಗಿ ಜರುಗಿದ ಧರ್ಮಸಭೆಗೆ ಗಣ್ಯರು ಶ್ರೀಗಳು ಚಾಲನೆ ನೀಡಿದರು. ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಗುರುಜಯಸಿದ್ಧೇಶ್ವರ ಶ್ರೀಗಳು, ಮಡಿವಾಳೇಶ್ವರ ಸ್ವಾಮೀಜಿ, ಸಂಸದ ರಮೇಶ ಜಿಗಜಿಣಗಿ, ನೇತ್ರತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಇತರರಿದ್ದರು. 
ಜಿಲ್ಲೆ

ವಿಷಮುಕ್ತ ಕೃಷಿ ಮಾಡಲು ಮುಂದಾಗಿ

ದೇವರಹಿಪ್ಪರಗಿ: ಶ್ರಾವಣ ಮಾಸದಲ್ಲಿ ಒಳ್ಳೆಯದನ್ನೇ ಶ್ರವಣ ಮಾಡಲು ಮುಂದಾಗೋಣ ಎಂದು ಕೊಲ್ಲಾಪುರ ಕನ್ಹೇರಿ ಸಿದ್ಧಗಿರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ಅಕ್ಕಮಹಾದೇವಿ ದೇವಸ್ಥಾನ ಸೇವಾ ಸಮಿತಿ ನೇತೃತ್ವದಲ್ಲಿ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ಅಂಗವಾಗಿ ಗುರುವಾರ ಜರುಗಿದ ಧರ್ಮಸಭೆಯ ಸಾನ್ನಿಧ್ಯ ಅವರು ಮಾತನಾಡಿದರು.

ಶ್ರಾವಣ ಮಾಸ ನಮಗೆಲ್ಲ ವಿಶೇಷವಾಗಿದೆ. ಇಲ್ಲಿ ನಾವೆಲ್ಲ ಯಾವುದೇ ಜಾತಿ ವ್ಯವಸ್ಥೆಗೆ ಅಂಟಿಕೊಳ್ಳದೆ ಮಾನವೀಯತೆಯ ಧರ್ಮವನ್ನು ರೂಢಿಸಿಕೊಳ್ಳಬೇಕು. ಜತೆಗೆ ನಮ್ಮ ಕೃಷಿ ಪದ್ಧತಿ ಬದಲಾಗಬೇಕು. ವಿಷಮುಕ್ತ, ನೈಸರ್ಗಿಕ ಕೃಷಿ ಮಾಡಬೇಕು. ದೇಸಿ ಗೋವಿನ ಉತ್ಪನ್ನಗಳನ್ನು ಬಳಸಿ ಉತ್ತಮ ಆರೋಗ್ಯ ಪಡೆಯಬೇಕು ಎಂದರು.

ಹಿರೂರು ಅನ್ನದಾನೇಶ್ವರ ಸಂಸ್ಥಾನಮಠದ ಗುರುಜಯಸಿದ್ಧೇಶ್ವರ ಸ್ವಾಮೀಜಿ, ದೇವರಹಿಪ್ಪರಗಿ ಗದ್ದುಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಮಾತನಾಡಿ, ಎಲ್ಲರೂ ಜಾತಿ ಭೇದ ಮರೆತು ಅಣ್ಣ ತಮ್ಮಂದಿರಂತೆ ಬಾಳಬೇಕು. ಅಧ್ಯಾತ್ಮದ ಆಚರಣೆಯ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು.
ಸಾತಿಹಾಳ ಮತ್ತು ಇಟಗಿ ಭೂಕೈಲಾಸ ಮೇಲುಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮೀಜಿ, ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಸ್ವಾಮೀಜಿ, ಭೈರವಾಡಗಿ ಗುರುಪ್ರಸಾದ ಶ್ರೀಗಳು ಮಾತನಾಡಿ, ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದೆ. ಇಲ್ಲಿ ನಾವೆಲ್ಲ ದಾನ ಮಾಡಿದ ಮಹನೀಯರನ್ನು ನೆನೆಯೋಣ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹರಸಿದರು.

ಸಂಸದ ರಮೇಶ ಜಿಗಜಿಣಗಿ, ನೇತ್ರತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ, ಸಂಗನಗೌಡ ಪಾಟೀಲ (ಸಾಸನೂರ), ಸಂಗಮೇಶ್ವರ ಶಾಸಿಗಳು, ಶಿವಗೊಂಡ ಕನ್ನಾಳ, ನಿಂಗರಾಯ ಪೂಜಾರಿ, ಚಿದಾನಂದ ಡೋಣೂರ, ಕೋನಪ್ಪಗೌಡ ಪಾಟೀಲ, ಕಲ್ಯಾಣಯ್ಯ ಮಠ, ಕಾಸು ಸಾಸಟ್ಟಿ, ಶಿವಾನಂದ ಅವಟಿ, ಪ್ರಕಾಶ ವಾಲೀಕಾರ, ಸಿದ್ಧರಾಮ ಬಾಲಿ, ನಾನಾಗೌಡ ನಾಗರಬೆಟ್ಟ, ಗಂಗನಗೌಡ ಪಾಟೀಲ, ಸಿದ್ರಾಮಯ್ಯ ಮಠ, ದೊಡ್ಡನಗೌಡ ಪಾಟೀಲ, ಬಿ.ಕೆ.ಪಾಟೀಲ, ಸುನೀಲ ಮಾಗಿ ಇತರರಿದ್ದರು.