ಜಿಲ್ಲೆ

ಕವಿಗಳಿಗೆ ಸತತ ಅಧ್ಯಯನ ಅಗತ್ಯ

ಅವಿನಾಶ್ ಜೈನಹಳ್ಳಿ

ಕವಿಗಳು ಸತತ ಅಧ್ಯಯನ ಮತ್ತು ಜೀವನಾನುಭವ ಹೊಂದಿರಬೇಕು. ಆಗ ಮಾತ್ರ ಶ್ರೇಷ್ಠ ಕವಿಯಾಗಲು ಸಾಧ್ಯ ಎಂದು ಕಸಾಪ ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.

ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜು ಕನ್ನಡ ವಿಭಾಗ-ನುಡಿರತ್ನ ಕನ್ನಡ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕದಿಂದ ಆಯೋಜಿಸಿದ್ದ ಯುವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕವಿತೆಯು ಸಾಹಿತ್ಯ ಪ್ರಕಾರದಲ್ಲಿ ವಿಶಿಷ್ಟ ಸ್ಥಾನ ಮತ್ತು ಗೌರವಕ್ಕೆ ಪಾತ್ರವಾಗಿದೆ. ಸಾವಿರ ಪದಗಳಲ್ಲಿ ಹೇಳಬಹುದಾದ ಸಂಗತಿಯನ್ನು ಕೆಲವೇ ಪದಗಳಲ್ಲಿ ಅರ್ಥೈಸುವ ಸಾಮರ್ಥ್ಯ ಕವಿತೆಗೆ ಇದೆ ಎಂದರು.

ಪ್ರಾಂಶುಪಾಲರಾದ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು, ಕವಿ ಡಾ.ನೀ.ಗೂ.ರಮೇಶ್, ಉಪ ಪ್ರಾಂಶುಪಾಲರಾದ ಡಾ.ಎನ್.ಭಾರತಿ, ಗಣಿತ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಎಸ್.ಸುಕೃತಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿನೋದ ಇದ್ದರು.