ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಕನ್ನಡದ ಯುವ ಲೇಖಕರಿಗೆ ನಾಡೋಜ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ' ಮತ್ತುಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆ' ಏರ್ಪಡಿಸಿದೆ. ವಯೋಮಿತಿ 18ರಿಂದ 25 ವರ್ಷ. ಕಥೆ ಮತ್ತು ಕವನಗಳು ಸ್ವತಂತ್ರವಾಗಿರಬೇಕು ಮತ್ತು ಎಲ್ಲೂ ಪ್ರಕಟವಾಗಿರಬಾರದು. ವಿಷಯದ ಆಯ್ಕೆ ಸ್ವಾತಂತ್ರ‍್ಯ ಇರುತ್ತದೆ. ನುಡಿ ತಂತ್ರಾ0ಶದಲ್ಲಿ ವರ್ಡ್ ಫೈಲ್‌ನಲ್ಲಿ ಟೈಫ್ ಮಾಡಿ spardhakvv@gmail.com ಮೇಲ್‌ಗೆ ಅ. 30ರೊಳಗೆ ಕಳಿಸಬೇಕು. ಎರಡೂ ವಿಭಾಗಗಳಲ್ಲಿ ಆಯ್ಕೆಯಾದ ಮೊದಲ 3 ಬರಹಗಳಿಗೆ ನವೆಂಬರ್‌ನಲ್ಲಿ ನಡೆಯುವ ನಾಡಹಬ್ಬದ ಸಂದರ್ಭದಲ್ಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.