ಜಿಲ್ಲೆ

ಕಾವ್ಯ ವಾಚನ, ವಿಶ್ಲೇಷಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಆಧುನಿಕ ಬದುಕಿನ ಜಂಜಾಟಗಳಿಂದ ವ್ಯಸ್ತನಾಗಿರುವ ಮನುಷ್ಯನಿಗೆ ಅಮ್ಮನಂತೆ ವಾತ್ಸಲ್ಯದ ಮಡಿಲಿನ ಆಶ್ರಯ ಕೊಡುವುದಕ್ಕೆ ಕವಿತೆ ಬೇಕು ಎಂದು ಕವಿ ಸುಮಿತ್​ ಮೇತ್ರಿ ಅಭಿಪ್ರಾಯಪಟ್ಟರು.

ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಪ್ರೊ. ಮಾಲತಿ ಪಟ್ಟಣಶೆಟ್ಟಿ ದತ್ತಿ ನಿಮಿತ್ತ ಇಲ್ಲಿನ ರಂಗಾಯಣ ಸಮುಚ್ಚಯ ಭವನದಲ್ಲಿ ಏರ್ಪಡಿಸಿದ್ದ ಕಾವ್ಯ ವಾಚನ, ವಿಶ್ಲೇಷಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಗರೇಖಾ ಗಾಂವ್ಕರ್​ ಮಾತನಾಡಿ, ಒಬ್ಬ ಮಹಿಳೆಗೆ ಕವಿತೆ ಎನ್ನುವುದು ತನ್ನ ಅಸ್ಮಿತೆಯನ್ನು ಸಾಬೀತುಪಡಿಸಲು ಅಗತ್ಯವಾದ ಮಾರ್ಗವಾಗಿದೆ.ಕೆಂಡ ಮತ್ತು ಇದ್ದಿಲುಗಳು ಒಂದೇ ಮೂಲವಾದ ಕಟ್ಟಿಗೆಯ ಬೇರೆ ಬೇರೆ ಸ್ಥಿತಿಗಳಾಗಿರುತ್ತವೆ. ಆದರೆ ಅವು ಕವಿತೆಯಲ್ಲಿ ರೂಪಕಗಳಾಗಿ ಮಹಿಳೆಯ ಅಸ್ತಿತ್ವದಂತೆ ಬದುಕಿನ ಬೇರೆ ಬೇರೆ ಮಜಲುಗಳನ್ನು ಅಭಿವ್ಯಕ್ತಿಸುತ್ತವೆ ಎಂದರು.

ದತ್ತಿದಾನಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಕವಿತೆ ಹೇಗೆ ತಮಗೆ ಬಹಳ ಪ್ರೀತಿಯ ಕ್ಷೇತ್ರ ಎಂದು ವಿವರಿಸಿದರು. ಚನ್ನಪ್ಪ ಅಂಗಡಿ, ಭಾಗ್ಯಜ್ಯೋತಿ ಮಾತನಾಡಿದರು. ಸಂಘದ ಅಧ್ಯಕ್ಷೆ ಡಾ.ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.

ಪ್ರಜ್ಞಾ ಮತ್ತಿಹಳ್ಳಿ ಸ್ವಾಗತಿಸಿದರು. ಡಾ.ಉಷಾ ಗದ್ದಗಿಮಠ ನಿರೂಪಿಸಿದರು. ಮೇಘಾ ಹುಕ್ಕೇರಿ ವಂದಿಸಿದರು.