ವಿಜಯವಾಣಿ ಸುದ್ದಿಜಾಲ ಧಾರವಾಡ
ಕವನ ನಮ್ಮ ಬದುಕಿನ ಭಾವನೆಗಳ ಹಾಗೂ ನೋವು ನಲಿವುಗಳ ಸಾಧನವಾಗಿದೆ ಎಂದು ಲೋಕೋಪಯೋಗಿ ಇಲಾಖೆ ವಿಶ್ರಾಂತ ಕಾರ್ಯದಶಿರ್ ಜಿ. ಸಿ. ತಲ್ಲೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಲೀಲಾತಾಯಿ, ಜೀವಣ್ಣಗೌಡ ಪಾಟೀಲ ಕುಲಕಣಿರ್ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸರೋಜಾ ಕುಲಕಣಿರ್ ಅವರ "ಆಳ' ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮನುಷ್ಯನ ಜೀವನದಲ್ಲಿ ಸಂತೋಷ ಹಾಗೂ ನಲಿವು ಣಣಕ್ಕೂ ಬದಲಾಗುತ್ತವೆ. ಆದರೆ ನೋವು ಮಾತ್ರ ಶಾಶ್ವತ. ಸರೋಜಾ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ನೋವು ನಲಿವುಗಳನ್ನು ತಮ್ಮ ಕೃತಿಯ ಮೂಲಕ ಓದುಗರಿಗೆ ತಿಳಿಸಿದ್ದಾರೆ ಎಂದರು.
ಪ್ರೊ. ದುಷ್ಯಂತ ನಾಡಗೌಡ ಮಾತನಾಡಿ, ಇದೊಂದು ಗಂಭೀರ ಕವನ ಸಂಕಲನ. ಸರೋಜಾ ಕುಲಕಣಿರ್ ತಮ್ಮ ಬದುಕಿನ ಸಮಾಜಿಕ ಸನ್ನಿವೇಶಗಳನ್ನು, ತಾವುಂಡ ನೋವು&ನಲಿವುಗಳನ್ನು ಕವನದ ಮೂಲಕ ಮನೋವಾಗಿ ಅಭಿವ್ಯಕ್ತಗೊಳಿಸಿದ್ದಾರೆ. ಕವನಗಳು ಓದುಗರ ಮನ ಮುಟ್ಟುವಂತೆ ಇವೆ. ಕಾವ್ಯಗಳು ಸಮಾಜದಲ್ಲಿ ಕಾಲಮಾನಕ್ಕನುಗುಣವಾಗಿ ಹುಟ್ಟುತ್ತವೆ ಎಂದರು.
ಪ್ರೊ. ಎಂ.ವೈ. ಸಾವಂತ ಮಾತನಾಡಿ, ಸರೋಜಾ ಕುಲಕಣಿರ್ ಆಳವಾಗಿ ಮತ್ತು ಗಂಭೀರವಾಗಿ ವಿಚಾರಿಸಿ ತಮ್ಮ ಆಳ ಕವನ ಸಂಕಲನ ಕೃತಿ ಬರೆದಿದ್ದಾರೆ. ಇಂದಿನ ವಿದ್ಯಾಥಿರ್ಗಳಲ್ಲಿ ಎಳೆಯ ವಯಸ್ಸಿನಲ್ಲೇ ಸ್ವರಚಿತ ಕವನ ಬರೆಯುವ ಹವ್ಯಾಸ ಬೆಳೆಸಬೇಕು. ಅಂದಾಗ ಭವಿಷ್ಯದಲ್ಲಿ ಅವರು ಉತ್ತಮ ಕವಿಗಳಾಗಲು ಸಾಧ್ಯ ಎಂದರು.
ಸಂದ ಕಾರ್ಯಾಧ್ಯ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸಿದ್ದರು. ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಮನೋಜ ಪಾಟೀಲ, ಎಂ.ಎಸ್. ನರೇಗಲ್, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಪ್ರೊ. ಬಿ.ಎಚ್. ಕೋಟೆಗೌಡರ ವಂದಿಸಿದರು.