ಜಿಲ್ಲೆ

ಕಾವ್ಯ ಪ್ರಶಸ್ತಿಗೆ ಕವನ ಸಂಕಲನ ಆಹ್ವಾನ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಈ ವರ್ಷದ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಗಾಗಿ ಹುಬ್ಬಳ್ಳಿಯ ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆಯು ಕವನ ಸಂಕಲನಗಳನ್ನು ಆಹ್ವಾನಿಸಿದೆ.

ಕವನ ಸಂಕಲನವು 2023 ಮತ್ತು 2024ರಲ್ಲಿ ಮೊದಲ ಬಾರಿ ಪ್ರಕಟವಾಗಿರಬೇಕು. ಅನುವಾದಿತ ಕೃತಿಯಾಗಿರಬಾರದು ಮತ್ತು ಈ ಮೊದಲು ಯಾವುದೇ ಪ್ರಶಸ್ತಿ ಪಡೆದುದಾಗಿರಬಾರದು. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಆಯ್ಕೆ ಸಮಿತಿಯಿಂದ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟ ಕೃತಿಯ ರಚನಾಕಾರರಿಗೆ ನವೆಂಬರ್​ನಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಎಂ.ಎ. ಸುಬ್ರಮಣ್ಯ ತಿಳಿಸಿದ್ದಾರೆ.

ಕವನ ಸಂಕಲನದ 2 ಪ್ರತಿಗಳನ್ನು ಜೂನ್ 10ರೊಳಗೆ ‘ಕಾವ್ಯ ಪ್ರಶಸ್ತಿಗಾಗಿ’ ಎಂದು ನಮೂದಿಸಿ ‘ಎಂ.ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ-580020’ ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.