ಜಿಲ್ಲೆ

ಕವನ ಸಂಕಲನ ಬಿಡುಗಡೆ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡ ಸಾಹಿತ್ಯ ಪರಿಷತ್​, ರಾಜಗುರು ಅಧ್ಯಯನ ಸಂಸ್ಥೆ ಹಾಗೂ ಯೋಧ ಯೋಗಿ ಪ್ರತಿಷ್ಠಾನ ವತಿಯಿಂದ ಮಾ. 3ರಂದು ಸಂಜೆ 5 ಗಂಟೆಗೆ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶಿವ ಕುಲಕರ್ಣಿ ವಿರಚಿತ "ಕೋಶದಿಂದ ಆಕಾಶಕ್ಕೆ' ಕವನ ಸಂಕಲನ ಹಾಗೂ ಅನುಭಾವದ ಅಲೆಗಳು ಸಿಡಿ ಬಿಡುಗಡೆ ಮಾಡಲಾಗುವುದು ಎಂದು ನಿವೃತ್ತ ಅಪರ ನಿಬಂಧಕ ಶಿವ ಕುಲಕರ್ಣಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಗುರುಸಿದ್ಧ ಸ್ವಾಮೀಜಿ, ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಡಾ. ಸಂಗಮೇಶ ಸವದತ್ತಿಮಠ ಗ್ರಂಥವನ್ನು ಹಾಗೂ ಶಿವಯೋಗಿ ಹಿರೇಮಠ ಅವರು ಸಿಡಿ ಬಿಡುಗಡೆ ಮಾಡಲಿದ್ದಾರೆ ಎಂದರು.

ವಿಶ್ವೇಶ್ವರಿ ಹಿರೇಮಠ ಮಾತನಾಡಿ, ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಯ.ರು. ಪಾಟೀಲ, ಡಾ. ಶಿವಾನಂದ ಕಲ್ಲೂರ, ದೇವೇಂದ್ರಕುಮಾರ ಪತ್ತಾರ, ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ವಿಶ್ವೇಶ್ವರಿ ಹಿರೇಮಠ ಆಗಮಿಸಲಿದ್ದಾರೆ. ಡಾ. ಡಿ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭಕ್ಕೂ ಪೂರ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಗೀತಾಂಜಲಿ ಕುಲಕರ್ಣಿ, ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಇತರರು ಇದ್ದರು.