ಜಿಲ್ಲೆ

ಪೋಕ್ಸೋ ಪ್ರಕರಣ, 40 ವರ್ಷ ಜೈಲು ಶಿಕ್ಷೆ

ಜಗನ್ನಾಥ್ ಕಾಳೇನಹಳ್ಳಿ

ಶಿರಾ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಸಾಬೀತಾದ ಹಿನ್ನೆಲೆ 22 ವರ್ಷದ ಯುವಕನಿಗೆ 40 ವರ್ಷ ಜೈಲು ಶಿಕ್ಷೆ ಹಾಗೂ 2.50 ಲಕ್ಷ ರೂ., ದಂಡ ವಿಧಿಸಲಾಗಿದೆ.

ಶಿರಾ ನಗರ ಠಾಣೆ ವ್ಯಾಪ್ತಿಯಲ್ಲಿ 2023ರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಹರೀಶ್​ ಶಿಕ್ಷೆ ಗೆ ಗುರಿಯಾದ ಆರೋಪಿ. ಸಂತ್ರಸ್ತೆ ಬಾಲಕಿ ನೀಡಿದ ದೂರು ಆಧರಿಸಿ ಹರೀಶ್​ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಠಾಣಿ ಇನ್ಸೆಪೆಕ್ಟರ್​ ಕೆ.ಪ್ರಕಾಶ್​ ತನಿಖೆ ಕೈಗೊಂಡು ಪ್ರಕರಣದ ಆರೋಪಿಯಾದ ಹರೀಶ್​ (22)ನನ್ನು ಬಂಧಿಸಿ, ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಎಫ್ ಟಿಎಸ್​ಸಿ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹರೀಶ್​ಗೆ 40 ವರ್ಷ ಜೈಲು ಶಿಕ್ಷೆ ಹಾಗೂ 2.50 ಲಕ್ಷ ರೂ., ದಂಡ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್​.ಆಶಾ ವಾದ ಮಂಡಿಸಿದ್ದಾರೆ.