ಜಿಲ್ಲೆ

ಉಜಿರೆಯಲ್ಲಿ ಪೋಕ್ಸೋ ಕಾಯ್ದೆ ಮಾಹಿತಿ

Avinash R

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪೋಕ್ಸೋ ಕಾಯ್ದೆ ಮಾಹಿತಿ ಕಾರ್ಯಕ್ರಮ ನಡೆಯಿತು.
ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ವಿನಿತ್ ಲ್ಯಾನ್ಸನ್ ಸಿಕ್ವೇರ ಮಾತನಾಡಿ, ಶಾಲೆಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಳೆ ವಯಸ್ಸಿನ ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ನಡೆಯುತ್ತಿದ್ದು, ಇವುಗಳನ್ನು ಹತ್ತಿಕ್ಕಲು ಪೋಕ್ಸೋ ಕಾಯಿದೆ ಎಂಬ ಕಾನೂನಿನ ಚೌಕಟ್ಟು ಅತಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಕರಲ್ಲಿ, ಪಾಲಕರಲ್ಲಿ ಮತ್ತು ಸಮುದಾಯದ ಸದಸ್ಯರಲ್ಲಿ ಮಕ್ಕಳ ಕುರಿತಾಗಿ ಕಾಳಜಿ ಮೂಡಿಸುವುದರೊಂದಿಗೆ ಮಕ್ಕಳಿಗೆ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸುವುದೇ ಈ ಕಾಯಿದೆಯ ಪ್ರಮುಖ ಗುರಿಯಾಗಿದೆ ಎಂದರು.

ಪ್ರಶಿಕ್ಷಣಾರ್ಥಿ ಚೈತ್ರಾ ಎಸ್.ಮಾತನಾಡಿ, ಕಾಯಿದೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಾಗ ಮಾತ್ರ ಸಮಾಜದಲ್ಲಿ ಶಿಸ್ತು, ರಕ್ಷಣೆ ಮತ್ತು ಭದ್ರತೆ ದೊರಕಲು ಸಾಧ್ಯವಿದೆ ಎಂದರು.

ಪ್ರಾಂಶುಪಾಲ ಸಂತೋಷ್ ಸಲ್ಡಾನ ಮಾತನಾಡಿ, ಶಿಕ್ಷಕರಿಗೆ ಶಾಲೆಗಳಲ್ಲಿ ವೈಯಕ್ತಿಕ ಶಿಸ್ತಿನ ಜತೆಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಉತ್ತಮ ನಡೆನುಡಿಗಳು ಅವಶ್ಯಕ ಎಂದರು.

ಎಲ್ಲ ಉಪನ್ಯಾಸಕ ವೃಂದದವರು, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಶಂಕರಲಿಂಗ ಅತಿಥಿ ಪರಿಚಯಿಸಿ, ಆಧ್ಯ ಯು.ನಿರೂಪಿಸಿದರು.